UN Networks
ಮಾಡೂರು:ಅರಣ್ಯ ನಾಶದಿಂದ ಮಳೆಯೂ ಕಡಿಮೆಯಾಗುತ್ತಿದ್ದು, ಪಕ್ಷಿ ಸಂಕುಲಗಳು ನಶಿಸಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಗಿಡ ಮರಗಳ ಪೋಷಣೆಯೊಂದಿಗೆ ಕಾಡನ್ನು ಸಂರಕ್ಷಿಸುವ ಕಾರ್ಯ ಆಗಬೇಕಿದೆ ಎಂದು ಮಂಗಳೂರು ಪ್ರಾದೇಶಿಕ ಅರಣ್ಯ ಅಧಿಕಾರಿ ಪಿ. ಶ್ರೀಧರ್ ಅಭಿಪ್ರಾಯಪಟ್ಟರು.
ಮರಗಳನ್ನು ಕಡಿಯುವ ಮೂಲಕ ಕಾಡುಗಳು ಅವನತಿಯತ್ತ ಸಾಗುತ್ತಿದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ. ಮಳೆ ಇಲ್ಲದೇ ಬರಗಾಲವನ್ನು ಎದುರಿಸುವ ಪರಿಸ್ಥಿತಿ ಎದುರಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಮರ ಗಿಡಗಳ ಪಾತ್ರ ಬಹುಮುಖ್ಯವಾಗಿದೆ. ಇದಕ್ಕೆ ಅನುಗುಣವಾಗಿ ಹಿಂದೂ ರುದ್ರ ಭೂಮಿ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ದೇರಳಕಟ್ಟೆ ರೋಟರಿ ಕ್ಲಬ್‍ನ ವಿಕ್ರಂ ದತ್ತಾ, ಕಾರ್ಯದರ್ಶಿ ಪಿ.ಬಿ ರೈ, ಮಾಡೂರು ಶಿರ್ಡಿ ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಪಿ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರು ಶೆಟ್ಟಿ ಸೊಳ್ಳೆಂಜಿರು, ಹಿಂದೂ ರುದ್ರ ಭೂಮಿ ಮಾಡೂರು ಇದರ ಅಧ್ಯಕ್ಷ ಪದ್ಮನಾಭ ಪಾದೆ, ಕೋಟೆಕಾರು ಪ.ಪಂ ಸದಸ್ಯೆ ದಿವ್ಯಾ ಸತೀಶ್, ಪರಿಸರವಾದಿ ಮಾಧವ ಉಳ್ಳಾಲ್, ನವೀನ್ ಮಾಡೂರು, ರಾಜೀವಿ ಕೆಂಪುಮಣ್ಣು ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣ ಶೆಟ್ಟಿ ತಾಮಾರ್ ಕಾರ್ಯಕ್ರಮ ನಿರ್ವಹಿಸಿದರು.