Site icon Ullalavani

ಸೋಮೇಶ್ವರ ದೇವಸ್ಥಾನದಲ್ಲಿ ಸಮುದ್ರಪೂಜೆ

UN Networks

ಉಳ್ಳಾಲ: ಸೋಮೇಶ್ವರ ಶಕ್ತಿಕೇಂದ್ರದ ಕರಾವಳಿ ಕಲ್ಯಾಣ ಪರಿಷತ್ ವತಿಯಿಂದ ಸಮುದ್ರ ಪೂಜೆ ಮತ್ತು ರಕ್ಷಾಬಂಧನ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.

ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಪಿಲಾರು ಮುಖ್ಯ ಅತಿಥಿಗಳಾಗಿದ್ದರು. ಧಾರ್ಮಿಕ ಮುಖಂಡ ಜ್ಯೋತಿ ಲೋಕೇಶ್ ಉತ್ಸವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ವಿಷ್ಣು ಸಹಸ್ರನಾಮ, ಸಮುದ್ರ ಪೂಜೆ , ರಕ್ಷಾಬಂಧನ ಕಾರ್ಯಕ್ರಮಗಳು ನಡೆಯಿತು.

Exit mobile version