Site icon Ullalavani

ತೊಕ್ಕೊಟ್ಟು : ಸ್ಕೌಟ್ಸ್-ಗೈಡ್ಸ್ ನಿರಂತರ ಸ್ವಚ್ಛತೆಗೆ ಚಾಲನೆ

UN Networks

ಉಳ್ಳಾಲ: ಎಳೆವೆಯಲ್ಲೇ ಸ್ವಚ್ಛತೆ, ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಕೌಟ್ಸ್-ಗೈಡ್ಸ್ ಹಮ್ಮಿಕೊಂಡಿರುವ ಕಾರ್ಯಕ್ರಮ ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು ಅಭಿಪ್ರಾಯಪಟ್ಟರು.

ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಕ್ಕೆ ಶನಿವಾರ ತೊಕ್ಕೊಟ್ಟಿನಲ್ಲಿ ಚಾಲನೆ ನೀಡಿ ಮಾತನಾಡಿದರು.

ನಾವು ಕಸ ಹೆಕ್ಕಿ ಪರಿಸರ ಶುಚಿಗೊಳಿಸಿದ ಮಾತ್ರಕ್ಕೆ ಊರು, ದೇಶ ಸ್ವಚ್ಛವಾಗುತ್ತದೆ ಎನ್ನುವ ಭಾವನೆ ಸಲ್ಲದು, ಆದರೂ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಸಹಕಾರಿ, ಅಲ್ಲದೆ ಮಕ್ಕಳಿಗೂ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಜಿ.ಕಜೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಫಾ.ಎಡ್ವಿನ್ ಮಸ್ಕರೇನಸ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಅಹ್ಮದ್ ಅಬ್ಬಾಸ್, ಜಿಲ್ಲಾ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ, ಪ್ರತೀಪ್ ಮಂಜನಾಡಿ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಭಗವಹಿಸಿದ್ದರು.

ಕಾರ್ಯದರ್ಶಿ ಮಜೀದ್ ಮಲಾರ್ ವಂದಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version