Site icon Ullalavani

ಸೈಯ್ಯದ್ ಮದನಿ ಉರ್ದು ಶಾಲೆಯಲ್ಲಿ ವನಮಹೋತ್ಸವ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಹಳೆಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವನಮಹೋತ್ಸವ ಮತ್ತು ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಜಿ ಗಿಡ ನಡುವ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಶಾಲೆಯ ಒಂದು,ಒಂದು ವಿದ್ಯಾರ್ಥಿ ಒಂದೊಂದು ಗಿಡ ನಟ್ಟು ಬೆಳೆಸಿದರೆ ಉಳ್ಳಾಲ ಪರಿಸರಕ್ಕೆ ಅದುವೇ ನೀವು ಕೊಡುವ ದೊಡ್ಡ ಸಂಪತ್ತಾಗಿದೆ ಎಂದರು.

ಮಂಚಿಲ ಫಿದಾಗೈಸ್ ಸದಸ್ಯರು ಶಾಲೆಯ ಮಕ್ಕಳಿಗೆ ಉಚಿತವಾಗಿ 100 ಬ್ಯಾಗ್‍ಗಳನ್ನು ನೀಡಿದರು.

ಉಳ್ಳಾಲ ನಗರ ಸಭೆ ಸದಸ್ಯ ಫಾರೂಕ್.ಯು.ಎಚ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಫೀಕ್ ಹಳೆಕೋಟೆ, ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಆಡಳಿತಾಧಿಕಾರಿ ಅಬ್ದುಲ್ ಲತೀಫ್,ಕೋಶಾಧಿಕಾರಿ ಕರೀಮ್.ಯು.ಎಚ್,ಶಾಲಾ ಸಂಚಾಲಕ ಮುಹಮ್ಮದ್ ಇಸ್ಮಾಯಿಲ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಇಬ್ರಾಹಿಂ,ದರ್ಗಾ ಸಮಿತಿ ಸದಸ್ಯರಾದ ಇಬ್ರಾಹಿಂ ಕಕ್ಕೆತೋಟ, ಶಿಕ್ಷಣ ಸಂಯೋಜಕ ಶ್ರೀಮತಿ ಹಿಲ್ಡಾ, ಫ್ರಾನ್ಸಿಸ್, ಫಿದಾ ಗೈಸ್ ಅಧ್ಯಕ್ಷ ಅರ್ಫಾಝ್, ಸದಸ್ಯರಾದ ನೌಫಲ್,ಫೈಝಲ್,ರಿಫಾತ್,ನಹೀಮ್,ಫಯಾಝ್,ಅಕ್ರಮ್,ಅಫೀಜ್,ಶಾಲಾ ಹಳೆ ವಿದ್ಯಾರ್ಥಿ ಅಬ್ದುಲ್ ರವೂಫ್ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪದ್ಯಾಯರು ಕೆ.ಎಮ್.ಕೆ ಮಂಜನಾಡಿ ಸ್ವಾಗತಿಸಿ,ಪ್ರಾಸ್ತವಿಕವಾಗಿ ಮಾತನಾಡಿದರು.

Exit mobile version