ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಅಂಬಿಕಾರೋಡ್ : ಸಾಮಾಜಿಕ ಸೇವಾ ಮನೋಭಾವೆನಯಿಂದ ಸಮಾಜ ಅಭಿವೃದ್ಧಿ ಸಾಧ್ಯ ಎಂದು ಗಟ್ಟಿ ಸಮಾಜ ಸೇವಾ ಸಂಘದ ನಿರ್ಗಮಿತ ಅಧ್ಯಕ್ಷ ಹಾಗೂ ಸೋಮೇಶ್ವರ ಸೋಮನಾಥ ದೇಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ಹೇಳಿದರು.
ಅವರು ಅಂಬಿಕಾರೋಡ್‍ನ ಗಟ್ಟಿ ಸಮಾಜ ಭವನದಲ್ಲಿ ಗಟ್ಟಿ ಸಮಾಜ ಸೇವಾ ಸಂಘ ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗಟ್ಟಿ ಸಮಾಜ ಸೇವಾ ಸಂಘದ 2017-19ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗಟ್ಟಿ ಸಮಾಜ ಸೇವಾ ಸಂಘದ ಪ್ರ.ಕಾರ್ಯದರ್ಶಿ ನಿತಿನ್ ಗಟ್ಟಿ ಲೇಡಿಹಿಲ್ ಸ್ವಾಗತಿಸಿ ವರದಿ ವಾಚಿಸಿದರು. ಕೋಶಾಧಿಕಾರಿ ಸತ್ಯಮೋಹನ್ ಗಟ್ಟಿ ಪಾಂಡೇಶ್ವರ ಲೆಕ್ಕಪತ್ರ ಮಂಡಿಸಿದರು. ಮಹಿಳಾ ವಿಭಾಗದ ಪ್ರ. ಕಾರ್ಯದರ್ಶಿ ಸುನಿತಾ ಗಟ್ಟಿ ವಂದಿಸಿದರು.