ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ : ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಬ್ರಾಹ್ಮಣ ಸಮಾಜ ಪ್ರಥಮ ಸ್ಥಾನದಲ್ಲಿದ್ದು, ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ನಾವು ಕೆಲವೊಂದು ಸ್ಥಾನಮಾನವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಈ ನಿಟ್ಟನಲ್ಲಿ ಬ್ರಾಹ್ಮಣ ಸಮಾಜದವರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಸಮಾಜದ ಅಭಿವೃದ್ಧಿ ಸಾದ್ಯ ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಮಣ ಅಸ್ರಣ್ಣ ಅಭಿಪ್ರಾಯಪಟ್ಟರು.
ಸಂಘಟನೆಗೆ ಅದರದ್ದೇ ಆದ ಶಕ್ತಿ ಇದೆ. ನಾವು ಹಿರಿಯರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಬಲಯುತರಾಗುವ ಅವಶ್ಯಕತೆಯಿದೆ. ನಮ್ಮ ಪೂರ್ವಿಕರು ಕಲಿಸಿದ ವಿದ್ಯೆಯನ್ನು ಇಂದಿನ ಪೀಳಿಗೆ ಮರೆಯುತ್ತಿರುವುದು ಖೇದನೀಯ. ವೇದಾಭ್ಯಾಸ, ದೇವರ ಬಗ್ಗೆ ಜ್ಞಾನ ಹೆಚ್ಚಿಸುವ ಕಾರ್ಯ ಆಗಬೇಕಾಗಿದ್ದು ಹಿರಿಯರನ್ನು, ತಂದೆ ತಾಯಿಯನ್ನು ಗೌರವಿಸುವುದರೊಮದಿಗೆ ಸಮಾಜದಲ್ಲಿ ನೊಂದವರ ಸಮಸ್ಯೆಗೆ ನಾವು ಶಕ್ತಿಯಾಗಬೇಕು. ಸಮಸ್ಯೆಯಿರುವವರು ಅದನ್ನು ಹಿರಿಯರಲ್ಲಿ ಹೇಳಿ ಬಗೆಹರಿಸಬೇಕು ಎಂದ ಅವರು ಬ್ರಾಹ್ಮಣರೆಲ್ಲರೂ ಪ್ರಥಮ ಸ್ಥಾನದಲ್ಲಿದ್ದರೂ ರಿಸರ್ವೇಶನ್‍ನ ಕಾರಣದಿಂದ ನಾವು ಸಮಸ್ಯೆಯನ್ನು ಎದುರಿಸುತ್ತಿದ್ದು ಅದನ್ನು ಮೆಟಿ ನಿಲ್ಲುವ ಕಾರ್ಯ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಆರ್‍ಟಿಓ ಇನ್ಸ್‍ಪೆಕ್ಟರ್ ರವಿಶಂಕರ ಕಾರಂತ ವಹಿಸಿ ಮಾತನಾಡಿ ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಚಿಂತನ ಮಂತನ ಕಾರ್ಯ ಆಗಬೇಕಾಗಿದೆ. ಇಂದಿನ ಯುವ ಪೀಳಿಗೆ ಐಟಿ ಬಿಟಿಯ ಹೆಸರಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ವಿಧೇಶದಲ್ಲಿ ನೆಲೆಸಿರುವವರು ಆಹಾರ ಪದ್ಧತಿಯನ್ನು ಬದಲಾವಣೆ ಮಾಡುತ್ತಿರುವುದು ಕಳವಳಕಾರಿ. ಬ್ರಾಹ್ಮಣ ಸಮಾಜದ ಮುಖ್ಯವಾದ ಅಂಗವಾಗಿರುವ ಜಪತಪ, ಸಂದ್ಯಾವಂದನೆ ಇದು ನಮ್ಮ ಆರೋಗ್ಯವನ್ನು ನಕಾಪಾಡಿಕೊಳ್ಳಲಲು ಸಹಕಾರಿಯಾಗಿದ್ದು, ತಿಂಗಳಿಗೊಮ್ಮೆಯಾದರೂ ಒಟ್ಟು ಸೇರಿ ಚರ್ಚೆ ನಡೆಸುವ ಕಾರ್ಯ ಮಾಡಬೇಕು ಮತ್ತು ನಮ್ಮ ಸಮಾಜ ರಾಜಕೀಯವಾಗಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಕೆ. ಎಂ. ಬಾಲಕೃಷ್ಣ, ಶ್ರೀ ನಾಗಬ್ರಹ್ಮಸ್ಥಾನ ಕೊಲ್ಯ ಇಲ್ಲಿನ ಧರ್ಮದರ್ಶಿ ಭಾಸ್ಕರ ಐತಾಳ್ ಭಾಗವಹಿಸಿದ್ದರು.
ಬ್ರಾಹ್ಮಣ ಪರಿಷತ್‍ನ ಅಧ್ಯಕ್ಷ ಕೆ. ಶಂಕರ ನಾರಾಯಣ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಕೇಶವ ಎಂ. ವಂದಿಸಿದರು. ಕೋಶಾ„ಕಾರಿ ಪ್ರಕಾಶ್ ಭಟ್ ಮಾಡೂರು ಕಾರ್ಯಕ್ರಮ ನಿರ್ವಹಿಸಿದರು.