Site icon Ullalavani

ಕಾಸರಗೋಡು: ಭಾಗಶ: ನಡೆದ ಹರತಾಳ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕಾಸರಗೋಡು : ತಿರುವನಂತಪುರಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ರಾಜೇಶ್ (34) ನ ಕೊಲೆಯನ್ನು ಪ್ರತಿಭಟಿಸಿ ಬಿಜೆಪಿ ಕರೆ ನೀಡಿದ ಹರತಾಳ ಕಾಸರಗೋಡು ಜಿಲ್ಲೆಯಲ್ಲಿ ಭಾಗಶ: ವಾಗಿತ್ತು.

ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು.
ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆದಿತ್ಯವಾರವಾದುದರಿಂದ ಸಾಮಾನ್ಯವಾಗಿ ಅಂಗಡಿ ಮುಂಗಟ್ಟುಗಳಿಗೆ ರಜೆಯಾದುದರಿಂದ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಲಿಲ್ಲ. ಬೀದಿ ವ್ಯಾಪಾರ ಎಂದಿನಂತೆ ಕಂಡು ಬರುತ್ತಿತ್ತು .

ನಗರದಲ್ಲಿ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಬಲವಂತವಾಗಿ ತಡೆದರು.
ಅಗತ್ಯ ಸೇವೆಗಳಿಗೆ ಸಂಚಾರಕ್ಕೆ ವಿನಾಯಿತಿ ಎಂದು ಪ್ರಕಟಿಸಿದ್ದರೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿಲ್ಲ . ತೆರೆದ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು.
ಪೊಲೀಸರ ಸಮಯಪ್ರಜ್ಞೆ ಮತ್ತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡುದರಿಂದ ಕೆಲ ಸಮಯದ ಬಳಿಕ ವಾಹನ ಸಂಚಾರ ಕ್ಕೆ ಅನುವು ಮಾಡಿಕೊಡಲಾಯಿತು .

ದಿಡೀರ್ ಹರತಾಳದಿಂದ ಸಂಕಷ್ಟಕ್ಕೆ ಸಿಲುಕಿದ ಜನಸಾಮಾನ್ಯರು
ದಿಡೀರ್ ಹರತಾಳದಿಂದ ಜನ ಸಾಮಾನ್ಯರು ಸಮಸ್ಯೆಗೆ ಸಿಲುಕಿದರು. ಶನಿವಾರ ರಾತ್ರಿ 9 ಗಂಟೆಗೆ ಸುಮಾರಿಗೆ ರಾಜೇಶ್ ನ ಕೊಲೆಯಾಗಿತ್ತು. ರಾತ್ರಿ 11 ಗಂಟೆಗೆ ಬಿಜೆಪಿ ಹರತಾಳಕ್ಕೆ ಕರೆ ನೀಡಲಾಯಿತು.
ಆದರೆ ಹರತಾಳ ದ ಬಗ್ಗೆ ಬೆಳಿಗ್ಗೆಯಷ್ಟೇ ಜನರಿಗೆ ಮಾಹಿತಿ ಲಭಿಸಿದ್ದು , ಹರತಾಳದ ಅರಿವಿಲ್ಲದೆ ಪೇಟೆಗೆ ತಲಪಿದ ಹಲವಾರು ಮಂದಿ ವಾಹನ ಸೌಲಭ್ಯ ವಿಲ್ಲದೆ ಪರದಾಡುವಂತಾಯಿತು.

ರೈಲು ಹಾಗೂ ದೂರದೂರಿನಿಂದ ಬಂದ ಹಲವಾರು ಪ್ರಯಾಣಿಕರು ಬಸ್ಸು , ವಾಹನಗಳಿಲ್ಲದೆ ಸಮಸ್ಯೆಗೆ ಒಳಗಾದರು .
ವಿವಾಹ ಸೇರಿದಂತೆ ಹಲವು ಪೂರ್ವ ನಿಗಧಿತ ಕಾರ್ಯಕ್ರಮಕ್ಕೆ ತೆರಳಬೇಕಾದವರು ಸಂಕಷ್ಟಕ್ಕೆ ಸಿಲುಕಿದರು .
ಒಟ್ಟಿನಲ್ಲಿ ದಿಡೀರ್ ಹರತಾಳ ಘೋಷಣೆ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿದರು

Exit mobile version