Site icon Ullalavani

ಕಿನ್ಯಾ: ಆ.4ರಂದು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಕಿನ್ಯಾ ಕೇಶವ ಶಿಶುಮಂದಿರ ಇದರ ಮಾತೃಮಂಡಳಿಯ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯು ಆ. 4ರಂದು ಶುಕ್ರವಾರ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವೇದಮೂರ್ತಿ ಟಿ. ಬಾಲಕೃಷ್ಣ ಭಟ್ ಪಂಜಾಳ ಇವರ ನೇತೃತ್ವದಲ್ಲಿ ನಡೆಯಲಿರುವುದು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾರದಾ ಸಮೂಹ ವಿದ್ಯಾಸಂಸ್ಥೆಯ ಸಂಚಾಲಕ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್, ಸುನಂದ ಎಂ. ಬಿ. ಪುರಾಣಿಕ್, ಭಾಜಪ ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಪ್ರಕೋಷ್ಠ ಸಹ ಸಂಚಾಲಕ ಎ. ಬದ್ರಿನಾಥ್ ಕಾಮತ್ ಕದ್ರಿ ಮಂಗಳೂರು, ಮೀನಾಕ್ಷಿ ಮತ್ತು ಸಂಕಪ್ಪ ಶೇಖ ಮುಳಿಯಗುತ್ತು ಬಡಕಬೈಲು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Exit mobile version