Site icon Ullalavani

ಸೋಮೇಶ್ವರ: ಶತಾಯುಷಿ ಯೋಧನಿಗೆ ಸನ್ಮಾನ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಸೋಮೇಶ್ವರ: ಮಂಗಳೂರು ಕರಾವಳಿ ಸಾಂಸ್ಕøತಿಕ ಪರಿಷತ್ ಇದರ ವತಿಯಿಂದ ಕಾರ್ಗಿಲ್ ವಿಜಯ್ ದಿವಸದ ಪ್ರಯುಕ್ತ ಶತಾಯುಷಿ ಹಾಗೂ ಹಿರಿಯ ಯೋಧ ಸೋಮೇಶ್ವರ ನಿವಾಸಿ ಕ್ಯಾಪ್ಟನ್ ಬಿ.ಎಸ್.ಬಾಲಕೃಷ್ಣ ರೈ ಇವರಿಗೆ ಸನ್ಮಾನ ಕಾರ್ಯಕ್ರಮ ಸ್ವಗೃಹದಲ್ಲಿ ಬುಧವಾರ ನಡೆಯಿತು.

ಹವಾಲ್ದಾರರಾಗಿ, ಹಿರಿಯ ಅಧಿಕಾರಿಯಾಗಿ, ಸುಬೇದಾರರಾಗಿ, ಮೇಜರ್, ಲೆಪ್ಟಿನೆಂಟ್ ಆಗಿ ಸೇವೆ ಸಲ್ಲಿಸಿರುವ ಬಾಲಕೃಷ್ಣ ರೈ ಇವರು 1972ರಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದರು. ಸ್ವಾತ್ರಂತ್ಯ ಪೂರ್ವದಲ್ಲಿ ಬರ್ಮಾ, ಪಾಕಿಸ್ತಾನದ ರಾವಲ್ಪಿಂಡಿ, ಅಬಾಟಾಬಾದ್‍ನಲ್ಲಿದ್ದುಕೊಂಡು ದೇಶಸೇವೆ ಸಲ್ಲಿಸಿರುತ್ತಾರೆ. ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿ ದೇಹದ ಅಂಗಾಂಗಗಳನ್ನು ಕಳೆದುಕೊಂಡವರಲ್ಲಿ ಇವರು ಒಬ್ಬರು. ಇದೀಗ 100ನೇ ವಯಸ್ಸಿನಲ್ಲಿ ಪತ್ನಿ ಮಕ್ಕಳು ಹಾಗೂ ಕುಟುಂಬಿಕರೊಂದಿಗೆ ಅತ್ಯಂತ ಕ್ರೀಯಾಶೀಲರಾಗಿ, ಕುಟುಂಬದ ಹಿರಿಯರಾಗಿ, ಸಮಾಜಕ್ಕೆ ಉನ್ನತಸ್ತರದ ವ್ಯಕ್ತಿಯಾಗಿ ಆದರ್ಶಪ್ರಾಯರಾಗಿರುವ ಇವರು ಸನ್ಮಾನವನ್ನು ಸ್ವೀಕಲಿಸಿದ್ದಾರೆ.

ಮಂಗಳೂರು ಕರಾವಳಿ ಸಾಂಸ್ಕøತಿಕ ಪರಿಷತ್ ಇದರ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡರುಗಳಾದ ಚಂದ್ರಹಾಸ್ ಉಚ್ಚಿಲ್, ರವೀಂದ್ರ ರೈ ಉಳಿದೊಟ್ಟು, ಜಯರಾಮ್ ಶೆಟ್ಟಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಧವ ಬಗಂಬಿಲ, ಸಂತೋಷ್ ಕುಮಾರ್ ರೈ ಬೊಳಿಯಾರ್, ಹಿರಿಯರಾದ ಸೀತಾರಾಮ್ ಶೆಟ್ಟಿ, ನಿವೃತ ಯೋಧ ಪ್ರವೀಣ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

Exit mobile version