ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ದರ್ಗಾ ಸಮಿತಿಯಲ್ಲಿ 38 ವರ್ಷ ಸುದೀರ್ಘ ಅವಧಿಗೆ ಸದಸ್ಯರಾಗಿದ್ದು, ಇತ್ತೀಚೆಗೆ ನಿಧನರಾದ ಬಾವಾ ಫಕೀರ್ ಸಾಹೇಬ ಅವರ ಅನುಸ್ಮರಣಾ ಕಾರ್ಯಕ್ರಮ ಮೇಲಂಗಡಿ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, 30 ವರ್ಷ ಮೇಲಂಗಡಿ ಹೊಸಪಳ್ಳಿ ಮುಹ್ಯಿದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ, 38 ವರ್ಷ ದರ್ಗಾ ಸಮಿತಿ ಸದಸ್ಯರಾಗಿ ಸುದೀರ್ಘ ಅವಧಿಯಲ್ಲಿ ಬಾವಾ ಫಕೀರ್ ಅವರು ಮಸೀದಿ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅನನ್ಯ, ಇದರ ಜೊತೆಗೆ ಸಾಮಾಜಿಕ ಕಳಕಳಿಯ ಹೊಂದಿದ್ದ ಅವರು ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮೇಲಂಗಡಿ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿ, ಮರಣ ಹೊಂದಿದ ದಿನವೂ ಬಾವಾ ಫಕೀರ್ ಅವರು ಊರಿನವರಿಗಾಗಿ ಕೆಲಸ ನಿರ್ವಹಿಸಿದ್ದಾರೆಯೇ ಹೊರತು ತನ್ನ ಚಾಕರಿ ಮಾಡುವಂತಹ ಅವಕಾಶ ಕಲ್ಪಿಸದೇ ಸುಖ ಮರಣ ಕಂಡಿದ್ದಾರೆ ಎಂದು ತಿಳಿಸಿದರು.
ಮೇಲಂಗಡಿ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ ದುಆ ನೆರವೇರಿಸಿದರು. ಆಜಾದ್ ನಗರ ಮಸೀದಿಯ ಮಾಜಿ ಅಧ್ಯಕ್ಷ ಬಾವಾ ಅಹ್ಮದ್, ಸಮಸ್ತ ನಾಯಕ ಯು.ಟಿ. ಮೊಹಮ್ಮದ್, ಕೆ.ಎಸ್.ಮೊೈದೀನ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್, ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್ ಕೆನರಾ, ಮೇಲಂಗಡಿ ಹೊಸಪಳ್ಳಿ ಮಸೀದಿ ಉಪಾಧ್ಯಕ್ಷ ಬಶೀರ್ ಗುಂಡಿಹಿತ್ಲು, ಪ್ರಧಾನ ಕಾರ್ಯದರ್ಶಿ ರಝಾಕ್ ಹರೇಕಳ, ಕೋಶಾಧಿಕಾರಿ ಅಬ್ದುಲ್ ಲತೀಫ್, ಬಶೀರ್ ಇಸ್ಮಾಯಿಲ್, ಸದರ್ ಮುಅಲ್ಲಿಮ್ ಜುನೈದ್ ಮೌಲವಿ, ಉಸ್ಮಾನ್ ಮದನಿ, ಸಿದ್ದೀಕ್ ಝುಹ್ರಿ, ಕಮಿಟಿ ಸದಸ್ಯರಾದ ಅಶ್ರಫ್ ಮೇಲಂಗಡಿ, ರಶೀದ್ ಮೊಹಮ್ಮದ್, ರಹಮತುಲ್ಲಾ, ಇಬ್ರಾಹಿಂ ಮೇಲಂಗಡಿ, ಮೊಹಮ್ಮದ್ ಅಸ್ಲಾಂ, ಅಹ್ಮದ್, ಹೈದರ್ ಉಳ್ಳಾಲ ಬೈಲ್, ಇಲ್ಯಾಸ್, ಇಸ್ಮಾಯಿಲ್ ನುಸ್ರತ್ ಮೊದಲಾದವರು ಉಪಸ್ಥಿತರಿದ್ದರು.ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.