Site icon Ullalavani

ಕುಂಪಲ : ತುಳು ಧಾರಾವಾಹಿ ನಿರ್ಮಾಪಕ ಆತ್ಮಹತ್ಯೆ

ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ತುಳು ಧಾರಾವಾಹಿ ನಿರ್ಮಾಪಕ ಕುಂಪಲ ಮೂರುಕಟ್ಟೆ ನಿವಾಸಿ ಪ್ರವೀಣ್ ಕುಮಾರ್ ಬಿ (50) ಮನೆಯಲ್ಲಿ ನೇಣು ಬಿಗಿದು ಬುಧವಾರ ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 


ಮನೆಯಲ್ಲಿ ಮೂವರು ಪುತ್ರರು ಹಾಗೂ ಪತ್ನಿ ಇದ್ದ ಸಂದರ್ಭದಲ್ಲೇ ಕೋಣೆಯೊಳಗೆ ಬಾಗಿಲು ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳ ಹೊತ್ತಾದರೂ ಕೋಣೆಯಿಂದ ವಾಪಸ್ಸಾಗದೇ ಇದ್ದಾಗ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಿಜೆಪಿ ಪಕ್ಷದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಪ್ರವೀಣ್ ಇವರು ಕಳೆದ ಒಂದು ವರ್ಷದಿಂದ ಚಿತ್ರೀಕರಣಗೊಳ್ಳುತ್ತಿದ್ದ ‘ದೇವೆರೆನ ದಯೆ ‘ ಎಂಬ ತುಳು ದಾರವಾಹಿಯನ್ನು ನಿರ್ಮಾಣ ಹಾಗೂ ನಿರ್ದೇಶಿಸುತ್ತಿದ್ದರು. ಹಣದ ಅಡಚಣೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version