ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಹೈನುಗಾರಿಕೆ ನಡೆಸುವವರಲ್ಲದ ಆ ಪ್ರದೇಶದಲ್ಲಿ ಕೆಲವು ಸಮಯಗಳಿಂದ ಹಲವು ವರ್ಷಗಳಿಂದ ಮಕ್ಕಳಂತೆ ಸುಮಾರು ದನಗಳನ್ನು ಸಾಕುತ್ತಾ ಬಂದ ಬಾರ್ ಮಾಲೀಕರ ಮೇಯಲು ಹೋದ ಮೂರು ಹಸುಗಳನ್ನು ಕಳ್ಳರು ಕಳವುಗೈದು ಪರಾರಿಯಾದ ಘಟನೆ ಕುಂಪಲದಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.
ಮಂಗಳವಾರ ಬೆಳಿಗ್ಗೆ ಮೇಯಲೆಂದು ಬಿಟ್ಟಿದ್ದ ದನಗಳಲ್ಲಿ ದುರ್ಗಿ, ಕಪಿಲ ಹಾಗೂ ಬಾಲಕ್ಕ ಹೆಸರಿನ ಗರ್ಭಿಣಿ ಹಸುಗಳು ಕಾಣೆಯಾಗಿದ್ದವು ಕುಂಪಲದ ಕೇಸರಿ ಮಿತ್ರ ಮಂಡಳಿ ಎದುರುಗಡೆ ತಡರಾತ್ರಿವರೆಗೆ ಕುಳಿತಿದ್ದ ಜಾನುವಾರುಗಳನ್ನು ಬುಧವಾರ ಬೆಳಗ್ಗಿನ ಜಾವ ಕಳವುಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಬಂದಿರುವ ಆಗಂತುಕರು ಕೃತ್ಯವನ್ನು ಎಸಗಿದ್ದಾರೆ. ಕಾರು ತೆರಳುವ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಸ್ಪಷ್ಟವಾಗಿರದ ಕಾರಣ ಪೊಲೀಸರ ತನಿಖೆಗೂ ತೊಂದರೆಯಾಗಿದೆ.ತಿನ್ನುವವರು ಜಾನುವಾರುಗಳನ್ನು ಸಾಕಿ ತಿನ್ನಲಿ, ಅದರ ನೋವು ತಿಳಿಯುತ್ತದೆ. ಅದನ್ನು ಬಿಟ್ಟು ಮಕ್ಕಳಂತೆ ಸಾಕಿ ಸಲಹುವ ಜಾನುವಾರುಗಳನ್ನು ಕ್ರೂರ ಮನಸ್ಸಿನವರು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಾರ್ ಮಾಲೀಕರ ಜಾನುವಾರು ಪ್ರೀತಿ : ಮೂಲತಃ ಮೂಡಬಿದ್ರೆಯವರಾದ ಸುಚಿವೃತ ಶೆಟ್ಟಿ ತೊಕ್ಕೊಟ್ಟುವಿನಲ್ಲಿ ಬಾರ್ ನಡೆಸುತ್ತಿದ್ದರು. ಮೂಡುಬಿದಿರೆ ಜಿಲ್ಲಾ ಪಂಚಾಯಿತಿ ಸದಸ್ಯ ಸುಚರಿತ ಶೆಟ್ಟಿ ಇವರ ಸಹೋದರರಾಗಿರುವ ಅವರು ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ ಹೊಂದಿದ್ದು, ಜಾನುವಾರು ಸಾಕುವ ಹವ್ಯಾಸವನ್ನು ಇಟ್ಟುಕೊಂಡಿದ್ದರು. ಪತ್ನಿ ಹಾಗೂ ಮಕ್ಕಳ ಜತೆಗೆ ಕುಂಪಲದ ಮೂರುಕಟ್ಟೆ ಪ್ರದೇಶದಲ್ಲಿ 10 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಎಲ್ಲೆಡೆಯೂ ಮನೆಗಳೇ ಇವೆ. ಯಾರೂ ಹೈನುಗಾರಿಕೆ ನಡೆಸುವವರೇ ಪ್ರದೇಶದಲ್ಲಿಲ್ಲ. ಆದರೆ ಸುಚಿವೃತ ಶೆಟ್ಟಿಯವರು ಜಾನುವಾರು ಮೇಲಿನ ಪ್ರೀತಿಯಿಂದ ಊರಿನಿಂದ ತಂದ ಜಾನುವಾರುಗಳನ್ನು ಮನೆಯಲ್ಲೇ ಸಾಕಲು ಆರಂಭಿಸಿದ್ದರು.