Site icon Ullalavani

ಕಿನ್ಯಾ ಗ್ರಾಮಸಭೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕಿನ್ಯ: ಗ್ರಾಮ ಪಂಚಾಯತ್ 2017ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಉಕ್ಕುಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲಿನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

2,500ರಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಕೇವಲ 12 ಸದಸ್ಯರಿಂದ ಅಭಿವೃದ್ಧಿ ಕಾರ್ಯಮಾಡಲು ಸಾದ್ಯವಿಲ್ಲ,ಗ್ರಾಮದ ಅಭಿವೃದ್ಧಿಗೆ ಸರ್ವ ಗ್ರಾಮಸ್ಥರ ಸಹಾಯ ಸಹಕಾರ ಬೇಕೆಂದು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಅಭಿಪ್ರಾಯ ಪಟ್ಟರು.

ಮೆಸ್ಕಾಂ ಅಧಿಕಾರಿಗಳು ಗ್ರಾಮಸ್ಥರ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು, ಹಾಗೂ ಕಿನ್ಯಾ ಗ್ರಾಮವು ಕ್ರೀಡೆಯಲ್ಲಿ ಹೆಸರುವಾಸಿಯಾಗಿದ್ದು ಈ ನಿಟ್ಟಿನಲ್ಲಿ ಉತ್ತಮ ಕ್ರೀಡಾಂಗಣ ಬೇಕೆಂದು ಗ್ರಾಮಸ್ಥರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ  ರಶೀದಾ ಬಾನು,ನೋಡೆಲ್ ಅಧಿಕಾರಿಯಾಗಿ ಮಂಗಳೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಶ್ಯಾಮಲಾ ಸಿ.ಕೆ, ಕಿನ್ಯಾ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ  ಸುರೇಖಾ, ಕಿನ್ಯಾ ಗ್ರಾಮ ಕರಣಿಕ ಎನ್.ಜಿ. ಪ್ರಸಾದ್, ಆಹಾರ ನಿರೀಕ್ಷಕರು ರಾಜಶ್ರೀ ಅಡ್ಯಂತಾಯ, ಉಳ್ಳಾಲ ಪೋಲೀಸ್ ಪ್ರಕಾಶ್ ಕುಮಾರ್.ಕೆ, ಆರೋಗ್ಯ ಅಧಿಕಾರಿ ಡಾ.ಗೋಪಿ ಪ್ರಕಾಶ್, ಕೋಟೆಕಾರ್ ಪಶು ಆಸ್ಪತ್ರೆಯ ಆರ್.ವಿ.ಸತ್ತಿಕರ್, ಕೋಟೆಕಾರ್ ಮೆಸ್ಕಾಂ  ಸಹಾಯಕ ಇಂಜಿನಿಯರ್ ಪ್ರವೀಣ್.ಬಿ.ಎನ್, ತಲಪಾಡಿ ಕೇತ್ರ ಶಿಕ್ಷಣಾಧಿಕಾರಿ  ವೀಣಾ ಡೇಸಾ, ಮಂಗಳೂರು ಅರಣ್ಯ ಇಲಾಖಾಧಿಕಾರಿ ಸೌಮ್ಯ ಮತ್ತು ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Exit mobile version