Site icon Ullalavani

ಚೀರುಂಭ ಭಗವತಿ ಸೇವಾ ಸಂಘದಿಂದ ೪೦೦ ವಿದ್ಯಾ ರ್ಥಿಗಳಿಗೆ ಸಹಾಯಧನ ವಿತರಣೆ⁠⁠⁠⁠

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ : ಜೀವನದಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಆತ್ಮವಿಶ್ವಾಸದೊಂದಿಗೆ ಶಿಕ್ಷಣ ಮುಂದುವರೆಸಿದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತೀ ತೀಯಾ ಸಮಾಜ ಸೇವಾ ಸಂಘ ಉಳ್ಳಾಲ ಇದರ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ ಅಭಿಪ್ರಾಯಪಟ್ಟರು.

ಅವರು ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ತೀಯಾ ಸಮಾಜ ಸೇವಾ ಸಂಘ ಉಳ್ಳಾಲ ಇದರ ಆಶ್ರಯದಲ್ಲಿ ಶೈಕ್ಷಣಿಕ  ಪ್ರೋತ್ಸಹದ ಅಂಗವಾಗಿ 400 ವಿದ್ಯಾರ್ಥಿಗಳಿಗೆ 3.5 ಲಕ್ಷ ರೂ. ವಿದ್ಯಾರ್ಥಿ ಸಹಾಯಧನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಸಮಯ. ಈ ಸಂದರ್ಭದಲ್ಲಿ ಯುವ ಸಮುದಾಯ ತಮ್ಮ ತಂದೆ ತಾಯಿ, ನೆರೆಕರೆಯವರು ಮತ್ತು ಸ್ನೇಹಿತರ ನಡವಳಿಕೆಯಿಂದ ಪ್ರೇರಿತರಾಗುತ್ತಾರೆ. ಹೆತ್ತವರು ಇಂತಹ ಸಂದರ್ಭದಲ್ಲಿ ಮಕ್ಕಳು ದಾರಿ ತಪ್ಪದಂತೆ ಮುತವರ್ಜಿ ವಹಿಸಿ ಕೊಳ್ಳಬೇಕು. ಉತ್ತಮ ಸಂಸ್ಕಾರದೊಂದಿಗೆ ಉತ್ತಮರ ಸ್ನೇಹ ಬೆಳೆಸಿದರೆ ಅವರ ಜೀವನ ಉತ್ತಮವಾಗಲು ಸಾಧ್ಯ ಅದರೆ ಕೆಟ್ಟ ಜನರ ಸಹವಾಸ ಮಾಡಿಕೊಂಡರೆ ಇಡೀ ಕುಟುಂಬ ವ್ಯಥೆ ಪಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೆತ್ತವರು ಮಕ್ಕಳಿಗೆ ಸಂಸ್ಕಾರ ಸಂಸ್ಕ್ರತಿಯನ್ನು ಕಲಿಸುವ ಕಾರ್ಯ ಮಾಡಬೇಕು ಮತ್ತು ದೇವಸ್ಥಾನಕ್ಕೆ ವರ್ಷಕ್ಕೆ ಒಂದು ಬಾರಿಯಾದರೂ ಭೇಟಿ ನೀಡುವ ಕಾರ್ಯಕ್ಕೆ ಮಕ್ಕಳಿಗೆ ಪ್ರೇರೇಪಣೆ ನೀಡುವ ಕಾರ್ಯವನ್ನು ಮಾಡಿದಾಗ ಮಕ್ಕಳು ಉತ್ತಮ ಸಂಸ್ಕಾರಯುತರಾಗಿ ಬೆಳೆಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ್, ಶ್ರೀ ಚೀರುಂಭ ಭಗವತೀ ತೀಯಾ ಸಮಾಜ ಸೇವಾ ಸಂಘ ಉಳ್ಳಾಲ ಇದರ ಪ್ರ. ಕಾರ್ಯದರ್ಶಿ ಬಾಬು ಬೆಳ್ಚಾಡ, ಕೋಶಾ„ಕಾರಿ ಯಶವಂತ ಉಚ್ಚಿಲ್, ಉಪಾಧ್ಯಕ್ಷ ವಿಶ್ವನಾಥ ಉಚ್ಚಿಲ್, ಮಾಧವ ತಲಪಾಡಿ, ದಾನಿಗಳಾದ ಮಾಧವ ಉಳ್ಳಾಲ್, ಉಮೇಶ್ ಸಾಲ್ಯಾನ್ ಬೆಂಜನಪದವು ಉಪಸ್ಥಿತರಿದ್ದರು.

ಸಂಘದ ಉಪ ಕಾರ್ಯದರ್ಶಿ ಸಂಜೀವ ಡಿ. ಉಳ್ಳಾಲ್ ಸ್ವಾಗತಿಸಿದರು. ಧನಂಜಯ ಬೆಂಜನಪದವು ವಂದಿಸಿದರು. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version