ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ಸಾರಥ್ಯದಲ್ಲಿ ಜಿಲ್ಲೆಯ 10 ಆಸ್ಪತ್ರೆಗಳಲ್ಲಿ ರಕ್ತ ಶೇಖರಣಾ ಅಭಿಯಾನದ ಪ್ರಯುಕ್ತ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭವು ತಾಜುಲ್ ಉಲಮಾ ಸುನ್ನೀ ಸೆಂಟರ್ ದೇರಳಕಟ್ಟೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಆಹ್ಮದ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಎಸ್.ವೈ.ಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವಾ ಹಾಜಿ,ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಫದ್ಮುಂಜ,ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ , ಎಸ್ಸೆಸ್ಸೆಫ್ ರಾಜ್ಯ ಮುಂಖಂಡ ಅಲ್ತಾಪ್ ಕುಂಪಲ, ಎಸ್ಸೆಸ್ಸೆಫ್ ಬ್ಲಡ್ ಬ್ಯಾಂಕ್ ನ ಕರೀಂ ಕದ್ಕಾರ್,ಯೂಸುಫ್ ರಝ್ವಿ ದೇರಳಕಟ್ಟೆ,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು,ಕಾರ್ಯದರ್ಶಿ ಸಯ್ಯದ್ ಖುಬೈಬ್ ತಂಙಳ್, ಸದಸ್ಯರಾದ ತೌಸೀಫ್ ಸ ಅದಿ ಹರೇಕಳ, ಹಮೀದ್ ನಾಟೆಕಲ್ ಮೊದಲಾದವರು ಉಪಸ್ಥಿತರಿದ್ದರು.
ಡಿವಿಷನ್ ಕಾರ್ಯದರ್ಶಿ ಸಫೀರ್ ರೆಂಜಾಡಿ ಸ್ವಾಗತಿಸಿ,ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.