Site icon Ullalavani

ಟೆಂಪೋ ಚಾಲಕನ ಕೊಲೆಯತ್ನ : ನಾಲ್ವರ ಬಂಧನ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ಅಜಾದ್ ನಗರದಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೆÇಲೀಸರು ಯಶಸ್ವಿಯಾಗಿದ್ದಾರೆ.

ಉಳ್ಳಾಲ ಮೇಲಂಗಡಿಯ  ಜಲಾಲ್ ಯಾನೆ ಜಲಾಲುದ್ದೀನ್(28), ಕುಂಪಲ ಶಾಲೆ ಬಳಿಯ  ಅರ್ಫಾನ್ ಯಾನೆ ಅಪ್ಪು (25), ಉಳ್ಳಾಲ ಟಿ.ಸಿ.ರೋಡಿನ  ಜಾಫರ್ ಸಾದಿಕ್ (20),  ಕೆ.ಸಿ.ರೋಡ್ ತಲಪಾಡಿಯ  ಮುಝಂಬಿಲ್ (22) ಬಂಧಿತರು.

ಪ್ರಕರಣದ ವಿವರ:
ಜು.11ರಂದು ಆಸ್ಟಿಮ್ ನಿತೇಶ್ ಮೊಂತೆರೋ ಎಂಬವರು ಉಳ್ಳಾಲ ಅಜಾದ್ ನಗರದ ಕಿರಿದಾದ ರಸ್ತೆಯಲ್ಲಿ ಅವರ ರಿಕ್ಷಾ ಟೆಂಪೆÇೀವನ್ನು ನಿಲ್ಲಿಸಿ ಟೆಂಪೆÇೀ ರಿಕ್ಷಾದಿಂದ ಮಣ್ಣಿನ ಲೋಡನ್ನು ಖಾಲಿ ಮಾಡುತ್ತಿದ್ದ ಸಮಯ ಅದೇ ರಸ್ತೆಯಿಂದಾಗಿ ಬಂದ ಕಪ್ಪು ಬಣ್ಣದ ಕಾರೊಂದರಲ್ಲಿ 4 ಮಂದಿ ವ್ಯಕ್ತಿಗಳು ಟೆಂಪೆÇೀ ರಿಕ್ಷಾವನ್ನು ರಸ್ತೆಯಿಂದ ತೆಗೆಯುವಂತೆ ಜೋರು ಮಾಡಿದ್ದರು.  ನಂತರ ರಿಕ್ಷಾಕ್ಕೆ ಅಡ್ಡ ನಿಂತು ಅವರಿಗೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ ಅವರ ಕಾರಿನ ಸೀಟಿನಲ್ಲಿದ್ದವನು ಕಾರಿನಿಂದ ಚೂರಿಯೊಂದನ್ನು ತೆಗೆದುಕೊಂಡು ಬಂದು ಅಸ್ಟಿಮ್ ನಿತೇಶ್ ಮೊಂತೆರೋ ರವರಿಗೆ ಚೂರಿಯಿಂದ ಕೈಗೆ ಇರಿದು, ನಂತರ ಎದೆಗೆ ಇರಿಯಲು ಪ್ರಯತ್ನಿಸಿದ ಸಮಯ ಅಸ್ಟಿಮ್ ನಿತೇಶ್ ಮೊಂತೆರೋ ರವರು ಅವರಿಂದ ಓಡಿ ತಪ್ಪಿಸಿಕೊಂಡಿದ್ದರು. ಗಾಯಗೊಂಡ ಅಸ್ಟಿಮ್ ನಿತೇಶ್ ಮೊಂತೆರೋ ರವರು ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತರಿಂದ  ಕೃತ್ಯಕ್ಕೆ ಬಳಸಿದ್ದ ಕಪ್ಪು ಬಣ್ಣದ ಆಲ್ಟೋ ಕಾರು ಹಾಗೂ ಪರಾರಿಯಾಗಲು ಯತ್ನಿಸಿದ್ದ ಇನ್ನೊಂದು ಆಲ್ಟೋ ಕಾರುಗಳನ್ನು  ವಶಪಡಿಸಿಕೊಳ್ಳಲಾಗಿದೆ.  ಕೃತ್ಯವೆಸಗಿ  ಆರೋಪಿಗಳು ಬೇರೆ ಕಾರಿನಲ್ಲಿ ಮಡಿಕೇರಿ ಕಡೆಗೆ ಪರಾರಿಯಾಗುವ ಸಂದರ್ಭ ಸುಳ್ಯ ಸಮೀಪ  ಕಾರು ಹಾಳಾದ ಹಿನ್ನೆಲೆಯಲ್ಲಿ ಗ್ಯಾರೇಜಿನಲ್ಲಿರಿಸಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡು ಸಿಸಿಬಿ ಪೊಲೀಸರಿಗೆ  ಹಸ್ತಾಂತರಿಸಿದ್ದಾರೆ.

ಪೆÇಲೀಸ್ ಕಮೀಷನರ್  ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ  ಹನುಮಂತರಾಯ ಮತ್ತು ಎಸಿಪಿ ಸಿಸಿಬಿ ಬಿ. ವೆಲೆಂಟೈನ್ ಡಿ ಸೋಜಾ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Exit mobile version