ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಂಗಳೂರು: ಶರತ್ ಮಡಿವಾಳ ಅಂತಿವi ಯಾತ್ರೆಯ ವೇಳೆ ನಡೆದ ಕಲ್ಲೆಸೆತದ ವಿದ್ಯಮಾನಕ್ಕೆ ದ.ಕ ಜಲ್ಲೆ ಸಂಪೂರ್ಣ ಭಯಪೀಡಿತವಾಗಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ ಎಂದು ಕೇಂದ್ರ ಸಚಿವ ಡಿ.ಸದಾನಂದ ಗೌಡ ತಿಳಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ದೇಶಕ್ಕೆ ,ರಾಜ್ಯಕ್ಕೆ ಕಪ್ಪು ಚುಕ್ಕೆ ತಂದು ಕೊಟ್ಟಿದೆ. ಬಂಟ್ವಾಳ, ಉಳ್ಳಾಲ ಎರಡು ಪ್ರದೇಶದಲ್ಲಿ ಬಿಟ್ಟರೆ ಇನ್ನೂ ಯಾವುದೇ ಕಡೆ ಇಲ್ಲದ ಇಂತಹ ವಿದ್ಯಾಮಾನಕ್ಕೆ ಕಂಡು ಬಂದಿಲ್ಲವಾದರೂ ಸುಳ್ಯ,ಪುತ್ತೂರು,ಮಂಗಳೂರು,ಬೆಳ್ತಂಗಡಿ ಇವೆಲ್ಲಾ ತಾಲೂಕಿನಲ್ಲೂ ನಿಷೇಧ ಜಾರಿ ಮಾಡಿ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿದ ತಕ್ಷಣ ನಿಷೇಧವನ್ನು ಹಿಂತೆಗೆದು ನಂತರ ಕೊಲೆಗೀಡಾದ ಶರತ್ ಅವರ ಕೊಲೆಗಡುಕರನ್ನು ಹಿಡಿಯಲು ಒತ್ತಾಯ ಮಾಡುವ ಸಂಘಟನೆಯವರ ಪ್ರತಿಭಟನೆಗೆ ತಡೆಯೊಡ್ಡಿ ನಾಯಕರನ್ನು ಬಂಧನ ಮಾಡುವ ಪ್ರಕ್ರಿಯೆ ನಿಜವಾಗಿಯೂ ದುರಂಕಾರದ ಆಡಳಿತ ಪರಮಾವಧಿಯಾಗಿದೆ. ಶರತ್ ಮಡಿವಾಳ ಅವರ ಅಂತಿಮಾ ಯಾತ್ರೆಯ ಸಂದರ್ಭದಲ್ಲಿ ಕಲ್ಲೆಸೆಯುವಂತಹ ಅಹಿತಕರ ಘಟನೆಗಳಿಗೆ ಜಿಲ್ಲೆಯ ಉಸ್ತುವಾರಿ ಸಚಿವರೇ ಹೊಣೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಶಾಂತಿ ನೆಲೆಸಿದೆ ,ಜನರಿಗೆ ರಕ್ಷಣೆ ಇಲ್ಲದೆ ಅಡಳಿತ ಪಕ್ಷ ಸರ್ವಾಧಿಕಾರ ತೋರ್ಪಡಿಸಿದೆ. ನಾಳೆ ಕ್ಯಾಬಿನೇಟ್ ಸಬೆ ನಡೆಯಲಿದ್ದು ಪ್ರಧಾನಿ ಮಂತ್ರಿಗಳು ಭಾಗವಹಿಸುತ್ತಾರೆ .ಈ ಮೂಲಕ ಬೇರೆ ಬೇರೆ ರಾಜ್ಯಗಳ ತೀವ್ರ ಸ್ವರೂಪದ ಸಮಸ್ಯೆಯನ್ನು ಒಂದು ನಿಮಿಷ ಇಲ್ಲಿ ವ್ಯಕ್ತಪಡಿಸಬಹುದು. ನಮ್ಮ ರಾಜ್ಯದ ಸ್ಥಿತಿ ಗತಿಯ ಬಗ್ಗೆ ನಾನು ಮಾತನಾಡುತ್ತೇನೆ. ಈಗಾಗಲೇ ಕೇರಳದಿಂದ ಹರಿದು ಬರುವ ಕೆಲ ಸಂಘಟನೆ ಮತ್ತು ಕೊಲೆಗಡುಕರಿಗೆ ಕರ್ನಾಟಕ ರಾಜ್ಯ ಆಶ್ರಯ ನೀಡುತ್ತಿರುವ ಬಗ್ಗೆ ಮತ್ತು ರಾಜಕೀಯ ಕೃಪಾಕಟಾಕ್ಷ ನೀಡುವ ಬಗ್ಗೆ ಗಂಭಿರ ವಿಷಯವನ್ನು ಮಾತುಕತೆ ನಡೆಸಲಿದ್ದಾನೆ ಎಂದರು.
ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕ ಸುನಿಲ್ ಕುಮಾರ್, ಗಣೇಶ್ ಕಾರ್ಣೀಕ್, ಬಿ. ನಾಗರಾಜ್ ಶೆಟ್ಟಿ, ಕೃಷ್ಣ ಜೆ. ಪಾಲೇಮಾರ್, ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.