Site icon Ullalavani

ಉಳ್ಳಾಲ ಪುರಸಭೆ ಸದಸ್ಯ ಮಹಮ್ಮದ್ ಹನೀಫ್ ನಿಧನ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಮುಸ್ಲಿಂ ಮತದಾರರೇ ಇರುವ ಉಳ್ಳಾಲ ನಗರಸಭೆಯ ಒಂದನೇ ವಾರ್ಡಿನಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆಗಿಳಿದು ಬಹುಮತಗಳಿಂದ ಚುನಾಯಿತರಾಗಿದ್ದ ಉಳ್ಳಾಲ ಪುರಸಭೆ ಸದಸ್ಯ ಕೋಟೆಪುರ ನಿವಾಸಿ ಮಹಮ್ಮದ್ ಹನೀಫ್ (48) ತೀವ್ರ ರಕ್ತದೊತ್ತಡಕ್ಕೆ ಒಳಗಾಗಿ ಸೋಮವಾರ ಸಂಜೆ ನಿಧನಹೊಂದಿದ್ದಾರೆ.

ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿಂದೆ ಜೀವನೋಪಾಯಕ್ಕೆ ಒಣಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಅವರು ಸದ್ಯ ನಗರಸಭೆ ಸದಸ್ಯರಾಗಿಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಥಮ ಬಾರಿ ಚುನಾವಣೆಗೆ ನಿಂತಿದ್ದ ಹನೀಫ್ ಅವರು ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ಇದ್ದು, ಬಹುಮತಗಳಿಂದ ಚುನಾಯಿತರಾಗಿ 2013 ರಿಂದ 2018ರ ಸಾಲಿನ ಪುರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Exit mobile version