Site icon Ullalavani

ಉಳ್ಳಾಲ ಮಂಚಿಲ ಉಚಿತ ಮದ್ರಸ ಪಾಠ ಪುಸ್ತಕ ವಿತರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಉಳ್ಳಾಲ ಮಸ್ಜಿದುಲ್ ಜಾಮಿಯಾ ಅಲ್-ಮುನವ್ವರ್ ಮತ್ತು ಮಂಬವುಲ್ ಉಲೂಂ ಮದ್ರಸ ಮಂಚಿಲ ಇದರ ಜಂಟಿ ಅಶ್ರಯದಲ್ಲಿ ಮುನವ್ವರ್ ಮತ್ತು ಮಂಬವುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಮದ್ರಸ ಪಾಠ ಪುಸ್ತಕ ವಿತರಣೆ ಮಸ್ಜಿದುಲ್ ಜಾಮಿಯಾ ಅಲ್-ಮುನವ್ವರ್ ಹಾಲ್‍ನಲ್ಲಿ ನಡೆಯಿತು.

ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜ್‍ನ ಪ್ರಿನ್ಸಿಪಾಲ್ ಅಹ್ಮದ್ ಬಾವಾ ಮುಸ್ಲಿಯಾರ್ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪಾಠ ಪುಸ್ತಕ ವಿತರಿಸಿ ಮಾತನಾಡಿ ಸಾವಿರ ವರ್ಷಗಳ ಹಿಂದೆ ಇಸ್ಲಾಮಿನ ಹಿರಿಯ ಪಂಡಿತರು ಬರೆದ ಗ್ರಂಥವನ್ನು ಇಂದು ಮದರಸಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು. ಧಾರ್ಮಿಕ ವಿಧ್ಯೆ ಕಲಿಸಿದರೆ ಮಾತ್ರ ಇಸ್ಲಾಂ ಧರ್ಮ ಅಂತ್ಯ ದಿನದವರೆಗೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಂಚಿಲ ಜುಮಾ ಮಸೀದಿ ಖತೀಬ್ ಹಸನ್ ಮುಬಾರಕ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ವಿಧ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಮದ್ರಸ ಗ್ರಂಥಗಳನ್ನು ನೀಡುವ ಮೂಲಕ ಪವಿತ್ರವಾದ ಇಸ್ಲಾಂ ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಮುಸ್ಲಮಾನ ಕರ್ತವ್ಯವಾಗಿದೆ ಎಂದು ಹೇಳಿದರು.

ಮಂಚಿಲ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇದ್ದಿನಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭ ಉಳ್ಳಾಲ ಎಸ್‍ವೈಎಸ್ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಙಳ್, ಮಂಗಳೂರು ದಕ್ಷಿಣ ವಿಧಾನಸಭಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಇಲ್ಯಾಸ್ ಉಳ್ಳಾಲ, ಮಂಜಿಲ ಜುಮಾ ಮಸೀದಿ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಬೆಂಗ್ರೆ, ಕೋಶಾಧಿಕಾರಿ ಹಾಜಿ ಅಬ್ದುಲ್ ರಝಾಕ್, ಹಾಜಿ ಬದ್ರುದ್ದೀನ್ ಯು.ಡಿ, ಹಾಜಿ ಪುತ್ತುಬಾವಾ, ಸದರ್ ಮುಹಲ್ಲಿಂ ಅಬ್ದುಲ್ ರಹ್ಮಾನ್ ಮದನಿ, ಮಂಜಿಲ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್ ಉಪಸ್ಥಿತರಿದರು.

Exit mobile version