Site icon Ullalavani

ವಿಂಶತಿ ಸಂಭ್ರಮದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮಂಜೇಶ್ವರ: ಸುರಕ್ಷಾ ದಂತ ಚಿಕಿತ್ಸಾಲಯದ ವಿಂಶತಿಯ ಸಂಭ್ರಮವನ್ನು ಬಹಳ ವಿಶಿಷ್ಟ ರೀತಿಯಿಂದ ಆಚರಿಸಲಾಯಿತು. ಜುಲೈ 3 1997ರಲ್ಲಿ ಅಂದಿನ ಬಂಟ್ವಾಳ ಕ್ಷೇತ್ರದ ಶಾಸಕರಾಗಿದ್ದ ಬಿ. ರಮಾನಾಥ ರೈ ಇವರಿಂದ ಉದ್ಘಾಟನೆಗೊಂಡು 20 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ನೆನಪಿನಲ್ಲಿ ಇಂದು ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಸಾಗುವಾನಿ ಮತ್ತು ನೇರಳೆ ಗಿಡಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಲಾಯಿತು.

20 ವರ್ಷಗಳ ಹಿಂದೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂದಿನ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾಗಿದ್ದ ಅಹ್ಮದ್ ಕುಂಞÂ ಇಂದು ಕೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿ ಗಿಡ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೋಗಿಗಳಿಗೆ ಉನ್ನತ್ತ ಮಟ್ಟದ ದಂತ ಚಿಕಿತ್ಸೆ ನೀಡುವುದರ ಜೊತೆಗೆ, ವೈದ್ಯಕೀಯ ರಂಗದ ಬಗ್ಗೆ ಲೇಖನಗಳನ್ನು ಬರೆದು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಡಾ. ಮುರಲೀ ಮತ್ತು ಡಾ. ರಾಜಶ್ರೀ ದಂಪತಿಗಳ ಕಾರ್ಯ ಶ್ಲಾಘನೀಯ.

ಜನರಲ್ಲಿ ಹಸಿರು ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಉಚಿತವಾಗಿ ಗಿಡಗಳನ್ನು ನೀಡಿದ್ದಾರೆ.  ಎಂದ ಅವರು ಗಿಡ ಮರಗಳನ್ನು ನೆಟ್ಟು ಪರಿಸರವನ್ನು ಶುಚಿಯಾಗಿಸಿಟ್ಟುಕೊಂಡಲ್ಲಿ ಸ್ವಚ್ಛ ಗಾಳಿ ಬೆಳಕು ನೀರು ದೊರಕಿ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.

ಚೂಂತಾರು ಸರೊಜೀನಿ ಭಟ್ ಪ್ರತಿಷ್ಠಾನ ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿಗೆ ಗಿಡಗಳನ್ನು ವಿತರಿಸಲಾಯಿತು.

Exit mobile version