ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಹೊಸದಿಲ್ಲಿ : “ಭಾರತದಿಂದ ಕಾಶ್ಮೀರವನ್ನು ವಿಮೋಚನೆಗೊಳಿಸುವ ತನಕವೂ ನಮ್ಮ ಹೋರಾಟ ಕೊನೆಗೊಳ್ಳುವುದಿಲ್ಲ’ ಆದ್ದರಿಂದ ಭಾರತದ ಯಾವುದೇ ಭಾಗದ ಮೇಲೆ ದಾಳಿ ನಡೆಸಬಲ್ಲೆವು ಎಂದು ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾಹುದ್ದೀನ್ ಪಾಕಿಸ್ತಾನದಲ್ಲಿ ಬೆದರಿಕೆ ನೀಡಿದ್ದಾನೆ.
ಭಾರತದಲ್ಲಿ ತಾನು ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವುದು ನಿಜ ಎಂದು ಒಪ್ಪಿಕೊಂಡಿರುವ ಸಲಾಹುದ್ದೀನ್, ಕೆಲ ದಿನಗಳ ಹಿಂದಷ್ಟೇ ಅಮೆರಿಕ ಸಲಾಹುದ್ದೀನ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಣೆ ಮಾಡಿತ್ತು. ಅಮೆರಿಕದ ಈ ಕ್ರಮವನ್ನು ಪಾಕಿಸ್ತಾನ ಸಂಪೂರ್ಣ ಅಸಮರ್ಥನೀಯ ಎಂದು ಹೇಳಿತ್ತು. ಅಲ್ಲದೆ, ಸ್ವಯಂ ಆಡಳಿತೆಯ ಕಾಶ್ಮೀರಿಗಳ ಹಕ್ಕನ್ನು ಬೆಂಬಲಿಸುವ ವ್ಯಕ್ತಿ ಸಲಾಹುದ್ದೀನ್ ಎಂದು ತಿಳಿಸಿತ್ತು.