ಉಳ್ಳಾಲ ನ್ಯೂಸ್ ನೆಟ್‍ವರ್ಕ್
ನವದೆಹಲಿ: ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ಉದ್ದೇಶದೊಂದಿಗೆ ದೇಶದ ಇತಿಹಾಸದ ಪುಟದಲ್ಲಿ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಿಎಸ್‍ಟಿ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಯಾಗಿದ್ದು ದೇಶದ ಜನತೆಗೆ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಆಗುವ ಮೂಲಕ ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಭರವಸೆ ಎಲ್ಲೆಡೆ ವ್ಯಕ್ತವಾಗಿದೆ.
ಸರಕು ಮತ್ತು ಸೇವಾ ತೆರಿಗೆಯಲ್ಲಿ ಏಕ ರೂಪದ ತೆರಿಗೆಯನ್ನು ದೇಶದೆಲ್ಲೆಡೆ ಜಾರಿಗೊಳಿಸಿದ್ದು ನ್ನು ಜಿಎಸ್ ಟಿ ಜಾರಿ ಬಳಿಕ ಯಾವ ವಸ್ತುಗಳು ಅಗ್ಗ ಮತ್ತು ಯಾವ ವಸ್ತುಗಳು ದುಬಾರಿಯಾಗಲಿವೆ ಎಂಬ ಪುಟ್ಟ ಮಾಹಿತಿ ಇಲ್ಲಿದೆ.
ಜಿಎಸ್ ಟಿ ರಹಿತ ವಸ್ತುಗಳು
ಹಾಲು, ಮೊಟ್ಟೆ, ಉಪ್ಪು, ಮಜ್ಜಿಗೆ, ಪ್ಯಾಕಿಂಗ್ ಮಾಡದ ಮೊಸರು, ನೈಸರ್ಗಿಕ ಜೇನುತುಪ್ಪ, ತಾಜಾ ಹಣ್ಣುಗಳು, ತರಕಾರಿಗಳು, ಜೋಳದ ಹಿಟ್ಟು, ಕಡಲೆ ಹಿಟ್ಟು, ಬ್ರೆಡ್, ಪ್ರಸಾದ, ಲಸ್ಸಿ, ಪ್ಯಾಕಿಂಗ್ ಮಾಡದ ಪನ್ನೀರ್, ತಾಜಾ ಮಾಂಸ, ಮೀನು, ಚಿಕನ್, ಬೆಲ್ಲ, ಧಾನ್ಯಗಳು, ಬ್ರಾಂಡ್ ರಹಿತ ಮತ್ತು ಪ್ಯಾಕಿಂಗ್ ಮಾಡದ ಕಾಫಿ ಮತ್ತು ಟೀ ಪುಡಿ, ತರಕಾರಿ ಎಣ್ಣೆ, ಮಕ್ಕಳ ಚಿತ್ರಗಳು, ಡ್ರಾಯಿಂಗ್ ಬುಕ್ಸ್, ಬಿದಿರಿನ ಚೇರ್ ಗಳು, ಕಸ ಪೆÇರಕೆ, ಕಾಜಲ್ (ಕಾಜಲ್ ಪೆನ್ಸಿಲ್ ಸ್ಟಿಕ್ಸ್ ಹೊರತುಪಡಿಸಿ), ಬಿಂದಿ, ಸಿಂಧೂರ, ಬಳೆಗಳು, ಕೈಮಗ್ಗ, ಅಂಚೆಚೀಟಿಗಳು, ನ್ಯಾಯಾಲಯದ ಪತ್ರಿಕೆಗಳು, ಮುದ್ರಿತ ಪುಸ್ತಕಗಳು, ಸುದ್ದಿ ಪತ್ರಿಕೆಗಳು, ಕಚ್ಛಾ ರೇಷ್ಮೆ, ಗಾಂಧಿ ಟೋಪಿ, ಖಾದಿ ನೂಲು, ತೆಂಗಿನಕಾಯಿ, ಭಾರತೀಯ ರಾಷ್ಟ್ರೀಯ ಧ್ವಜ, ಪೂಜಾ ವಸ್ತುಗಳು, ಪ್ರಸಾದ, ಗರ್ಭನಿರೋಧಕಗಳು, 1,000 ರು ಗಳಿಗಿಂತ ಕಡಿಮೆ ದರದ ಹೋಟೆಲ್ ಗಳು ಮತ್ತು ವಸತಿ ಸೌಕರ್ಯಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ತೆರಿಗೆ ರಹಿತವಾಗಿರುತ್ತವೆ.
ಜಿಎಸ್ ಟಿ ಜಾರಿ ಬಳಿಕ ದುಬಾರಿಯಾದ ವಸ್ತುಗಳು
ಬ್ರಾಂಡೆಡ್ ಟೀ, ಕಾಫಿ, ರೆಸ್ಟೋರೆಂಟ್ ಗಳಲ್ಲಿನ ಊಟ, ಫೈವ್ ಸ್ಟಾರ್ ಹೋಟೆಲ್ ಗಳು, ಶಾಂಪೂ, ಡಿಯೋಡ್ರೆಂಟ್ ಗಳು, ವಿಮಾನಯಾನ ಪ್ರಯಾಣ, ರೈಲಿನ ಬಿಸಿನೆಸ್ ಕ್ಲಾಸ್ ಪ್ರಯಾಣ, 350ಕ್ಕೂ ಹೆಚ್ಚು ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್ ಗಳು, ಟಿವಿ, ಫ್ರಿಡ್ಜ್, ಎಸಿ, ವಾಷಿಂಗ್ ಮಷಿನ್, 100ರು,ಗಿಂತ ಅಧಿಕ ಬೆಲೆಯ ಸಿನಿಮಾ ಟಿಕೆಟ್ ಗಳು, 7500ಕ್ಕೂ ಅಧಿಕ ಬೆಲೆಯ ರೂಂಗಳನ್ನು ಹೊಂದಿರುವ ಹೊಟೆಲ್ ಗಳು, ಮೊಬೈಲ್ ಫೆÇೀನ್ ಬಿಲ್ ಸೇವೆ, ವಿಮಾ ಪ್ರೀಮಿಯಮ್ ಗಳು, ಬ್ಯಾಕಿಂಗ್ ಸೇವೆಗಳ ದರಗಳು, ಬ್ರಾಡ್ ಬ್ಯಾಂಡ್ ಸೇವೆ, ತಂಪು ಪಾನೀಯಗಳು, ತಂಬಾಕು, ಐಷಾರಾಮಿ ವಸ್ತುಗಳು, ಸಿಗರೇಟ್, ಮಧ್ಯಪಾನ, ಮೊಬೈಲ್ ಬಿಲ್, ಟ್ಯೂಷನ್ ಫೀ, ಬ್ಯೂಟಿಪಾರ್ಲರ್ ಗಳು, ಅಂಗಡಿ ಮತ್ತು ಫ್ಲಾಟ್ ಗಳ ಖರೀದಿಗಳು ದುಬಾರಿಯಾಗಿವೆ.
ಜಿಎಸ್ ಟಿ ಜಾರಿ ಬಳಿಕ ಕಡಿಮೆಯಾದ ವಸ್ತುಗಳು
ಪ್ಯಾಕಿಂಗ್ ಮಾಡದ ಆಹಾರ ಧಾನ್ಯಗಳು, ಬ್ರಾಂಡೆಡ್ ಅಲ್ಲದ ಹಿಟ್ಟು, ಮೈದಾ, ಕಡಲೆ ಹಿಟ್ಟು, ತಾಜಾ ತರಕಾರಿಗಳು, ಹಣ್ಣುಗಳು, ಬ್ರಾಂಡೆಡ್ ಉಪ್ಪು, ಪುಟ್ಟ ರೆಸ್ಟೋರೆಂಟ್ ಗಳಲ್ಲಿ ಆಹಾರ ಸೇವನೆ, ಚಾಕು ಕತ್ತರಿಗಳು, ಕೆಚಪ್, ಸಾಸ್ ಮತ್ತು ಉಪ್ಪಿನಕಾಯಿ. ಸೋಪ್ ಗಳು, ಕೂದಲು ತೈಲ ಮತ್ತು ಟೂತ್ ಪೇಸ್ಟ್, 350ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳು ಮತ್ತು ಎಸ್ ಯುವಿ ಕಾರುಗಳು, ಪ್ರೆಷರ್ ಕುಕ್ಕರ್ ಗಳು, ಸಾಮಾನ್ಯ ವರ್ಗದ ವಿಮಾನ ಪ್ರಯಾಣ, ಪ್ಯಾನ್ ಗಳು, 100ರು ಗಿಂತ ಕಡಿಮೆ ದರದ ಚಲನಚಿತ್ರ ಟಿಕೆಟ್ ಗಳು, 7500ಕ್ಕೂ ಕಡಿಮೆ ದರದ ರೂಂಗಳನ್ನು ಹೊಂದಿರುವ ಹೊಟೆಲ್ ಗಳು, ಪಾದರಕ್ಷೆ ಮತ್ತು ಜವಳಿ, ತೂಕದ ಯಂತ್ರಗಳು, ಯುಪಿಎಸ್, ಆದಾಯ ಅಂಚೆಚೀಟಿಗಳ ದರ ಕಡಿಮೆಯಾಗಲಿವೆ.