ಉಳ್ಳಾಲ ನ್ಯೂಸ್ ನೆಟ್‍ವರ್ಕ್
ದೇರಳಕಟ್ಟೆ : ಮಹಿಳಾ ಸಂಶೋಧಕರನ್ನು ಉತ್ತೇಜಿಸಲು “ಜಪಾನ್ ಬೆಂಬಲಿತ ಮಹಿಳಾ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣ ಮತ್ತು ವಿಜ್ಞಾನಕ್ಕಾಗಿ ಮಹಿಳಾ ಸಬಲೀಕರಣ” ಕಾರ್ಯಕ್ರಮದಡಿಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಮೂರು ಮಹಿಳಾ ಸಂಶೋಧಕರು ಜು. 3ರಿಂದ 12ರತನಕ ಜಪಾನ್ ಮಿಯಾಝಾಕಿಯಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.
ಮೂವರು ಮಹಿಳಾ ಸಂಶೋಧಕರಲ್ಲಿ ಪ್ರಮೀಳಾ ಪೂನಚಾ ಆವರು ಕ್ಷೇಮ ಡೀನ್ ಪ್ರೊ. ಡಾ. ಸತೀಶ್ ಭಂಡಾರಿ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ರಾಜೇಶ್ವರಿ ಅವರು ಡಾ. ಕೃಷ್ಣಕುಮಾರ್ ಹಾಗೂ ಡಾ. ಜೂಲಿಯಟ್ ಅವರು ನಿಟ್ಟೆ ವಿವಿಯ ಸಂಶೋಧನಾ ವಿಭಾಗದ ನಿರ್ದೇಶಕಿ ಡಾ. ಇಂದ್ರಾಣಿ ಕರುಣಾಸಾಗರ್ ಅವರರಿಂದ ಪಿಎಚ್‍ಡಿ ಅಧ್ಯಯನ ಮಾಡುತ್ತಿದ್ದಾರೆ. ಮಿಯಾಝಾಕಿಯಾ ವಿವಿಯ ಇತರ ವಿಜ್ಞಾನಿಗಳಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವಲ್ಲಿ ಕಾರ್ಯಕ್ರಮ ಸಹಕಾರಿಯಾಗಲಿದೆ.