Site icon Ullalavani

ಪೇಜಾವರ ಶ್ರೀ ವಿರುದ್ಧ ಜುಲೈ 2ರಂದು ಪ್ರತಿಭಟನೆ: ಮುತಾಲಿಕ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಶ್ರೀಗಳು ಇಫ್ತಾರ್ ಕೂಟ ನಡೆಸಿ ನವಾಜ್ ಮಾಡಲು ಅವಕಾಶ ನೀಡಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರ ಧೋರಣೆಯನ್ನು ಖಂಡಿಸಿ ರಾಜಾದ್ಯಂತ ಜುಲೈ 2ರಂದು ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್ ಸ್ವಾಮೀಜಿ ಹಿಂದೂಗಳ ಕ್ಷೇತ್ರದಲ್ಲಿ ನಮಾಜ್ ಮಾಡಲು ಅನುಮತಿ ನೀಡಿದ್ದು ಸಮಂಜಸವಲ್ಲ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಲು ಮಾತ್ರ ಬಿಡುತ್ತೇವೆ ಯಾವುದೇ ಕಾರಣಕ್ಕೂ ಬಾಬ್ರಿ ಮಸೀದಿ ಮರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದ ಸ್ವಾಮೀಜಿಗೆ ಅಂದು ಇಲ್ಲದ ಸೌಹಾರ್ದತೆ ಸಾಮಾರಸ್ಯ ಇದೀಗ ಏಕೆ ನೆನಪಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version