Site icon Ullalavani

ಕಡಲ್ಕೊರೆತೆ: ತಾತ್ಕಾಲಿಕ ಗಂಜಿ ಕೇಂದ್ರ ಸ್ಥಾಪನೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಕಡಲ್ಕೊರೆತದಿಂದ ಅಪಾಯದಲ್ಲಿರುವ ಉಳ್ಳಾಲ ನಿವಾಸಿಗಳಿಗೆ ತಾತ್ಕಾಲಿಕವಾಗಿ ಗಂಜಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ಭಾಗದಲ್ಲಿನ ಅಪಾಯದಲ್ಲಿರುವ ಸುಮಾರು 40 ಮನೆಗಳನ್ನು ಗುರುತಿಸಲಾಗಿದೆ.

ಉಳ್ಳಾಲದಲ್ಲಿ ಗಂಜಿ ಕೇಂದ್ರ ಸ್ಥಾಪನೆಗೆ ಸಹಾಯಕ ಕಮಿಷನರ್ ಸ್ಥಳಿಯಾಡಳಿತ ಸಂಸ್ಥೆಗೆ ಆದೇಶ ನೀಡಿದ್ದು, ಸ್ಥಳೀಯ ಅಂಗನವಾಡಿ ಕೇಂದ್ರ, ಖಾಲಿ ಇರುವ ಫ್ಲಾಟ್‍ಗಳು, ಮತ್ತು ಹಾಸ್ಟೆಲ್‍ಗಳಿಗೆ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ ಎಂದು ಪೌರಾಯುಕ್ತೆ ವಾಣಿ ವಿ. ಆಳ್ವ ತಿಳಿಸಿದ್ದಾರೆ.

ಸಮುದ್ರದ ಅಲೆಗಳು ಮನೆಗಳಿಗಪ್ಪಳಿಸುತ್ತಿದ್ದು, ಮೊಗವೀರಪಟ್ಣ, ಕಿಲಿರಿಯಾ ನಗರ ಮುಕ್ಕಚ್ಚೇರಿ, ಸುಭಾಷ್‍ನಗರ, ಕೈಕೋದಲ್ಲಿ ಮನೆಗಳ ಒಳಗೆ ಸಮುದ್ರದ ನೀರು ತುಂಬಿ ವಾಸಿಸಲು ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಆಪಾಯದಲ್ಲಿರುವ ಮನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಗುರುವಾರ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟಿ ಸಂದರ್ಭದಲ್ಲಿ ಕೈಕೋ ಬಳಿ ಸಹಾಯಕ ಕಮಿಷನರ್ ಅವರನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡರು.

ಶಾಶ್ವತ ಕಾಮಗಾರಿಯಿಂದ ಕೈಕೋ ಕಿಲಿರಿಯಾ ನಗರದಲ್ಲಿ ಕಡಲ್ಕೊರೆತ ಹೆಚ್ಚಿದ್ದು, ಇತ್ತ ಮೊಗವೀರಪಟ್ಣದಲ್ಲಿ ಕಳೆದ ಮೂರು ದಿನಗಳಿಂದ ಸಮುದ್ರದ ಬಿರುಸು ಹೆಚ್ಚಿದೆ. ಮುಖ್ಯವಾಗಿ ಕೋಟೆಪುರ ಮತ್ತು ಮೊಗವೀರಪಟ್ಣ ಬೀಚ್ ಬಳಿ ಸಮುದ್ರದ ಮದ್ಯೆ ರೀಫ್ ಕಾಮಗಾರಿ ನಡೆದಿದ್ದು ಈ ಎರಡು ರೀಫ್‍ಗಳ ಮದ್ಯೆ ಸುಮಾರು 400ಮೀಟರ್ ಅಂತರವಿರುವುದರಿಂದ ಈ ನಡುವೆ ಬರುವ ಮೊಗವೀರಪಟ್ಣ ಪ್ರದೇಶಕ್ಕೆ ಸಮದ್ರದ ಅಲೆಗಳು ಪರಿವರ್ತನೆಗೊಂಡು ಸಮುದ್ರದ ದೊಡ್ಡ ದೊಡ್ಡ ಅಲೆಗಳು ಬರುತ್ತಿದ್ದು, ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ.
ಕಡಲ್ಕೊರೆತ ಪ್ರದೇಶಕ್ಕೆ ಸಹಾಯಕ ಕಮಿಷನರ್ ಅವರೊಂದಿಗೆ ತಹಶೀಲ್ದಾರ್ ಸಿ. ಮಹಾದೇವ, ಕಂದಾಯ ಅಧಿಕಾರಿ ಜೋಸ್ಲಿನ್ ಸ್ಟೀಫನ್, ಪ್ರಮೋದ್ ಕುಮಾರ್, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಮೋನು, ಪೌರಾಯುಕ್ತೆ ವಾಣಿ ವಿ. ಆಳ್ವ ಸಹಾಯಕ ಕಾರ್ಯಪಾಲಕ ಅಭಿಯಂತರರಾದಉಮೇಶ್ ಕಾಮತ್ ,ಕಿರಿಯ ಅಭಿಯಂತರರಾದ ದಿವಾಕರ್, ಕೌನ್ಸಿಲರ್‍ಗಳಾದ ಮಹಮ್ಮದ್ ಮುಕ್ಕಚ್ಚೇರಿ, ಸೂರ್ಯಕಲಾ,ಮೀನಾಕ್ಷಿ ದಾಮೋದರ್ ಉಪಸ್ಥಿತರಿದ್ದರು.

Exit mobile version