ಉಳ್ಳಾಲ: ಪತಂಜಲಿಯ ಅಲೊ ವೀರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡೊಂದು ಪತ್ತೆಯಾಗಿದೆ.
ಸಮಾಜಸೇವಕ ಚಂದ್ರಹಾಸ್ ಮಾಡೂರು ಅವರು ಉಡುಪಿಯಿಂದ ಏಜೆಂಟರೋರ್ವರ ಮುಖೇನ ತರಿಸಿದ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಪತಂಜಲಿ ಕಂಪೆನಿಗೆ ಸಂಬಂಧಿಸಿದ ಮಂಗಳೂರಿನ ಅಧಿಕೃತರುಗಳಲ್ಲಿ ವಿಚಾರಿಸಿದಾಗ ಉಡಾಫೆಯಿಂದ ವರ್ತಿಸಿದ್ದಾರೆ. ಇದು ಕಂಪೆನಿಯಿಂದ ಆಗಿರುವ ತಪ್ಪು. ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ಅನ್ನುವ ರೀತಿಯಲ್ಲಿ ಪ್ರಚಾರ ಮಾಡಿಕೊಂಡು, ಜನರನ್ನು ಮೋಸದ ದಾರಿಗೆ ಎಳೆದು ಕಂಪೆನಿಯನ್ನು ಬೆಳೆಸುತ್ತಿದ್ದಾರೆ. ಇದರ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಚಂದ್ರಹಾಸ್ ಮಾಡೂರು ತಿಳಿಸಿದ್ದಾರೆ.