Site icon Ullalavani

ಸಾಂಬಾರ್ ತೋಟದಲ್ಲಿ ಸಂಭ್ರಮದಿಂದ ಈದ್ ಆಚರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮುಡಿಪು: ಈದ್ ಹಬ್ಬದ ಚಂದ್ರದರ್ಶನ ಆದ ಬಗ್ಗೆ ಖಾಝಿಗಳ ನಿರ್ಧಾರದಲ್ಲಿ ಭಿನ್ನ ನಿಲುವು ವ್ಯಕ್ತವಾದ ಹಿನ್ನೆಲೆಯಲ್ಲಿ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ರವರು ಸೋಮವಾರ ಹಬ್ಬ ಆಚರಿಸುವಂತೆ ನಿರ್ದೇಶನದ ಮೇರೆಗೆ ಮುಡಿಪು ಸಂಯುಕ್ತ ಜಮಾಅತ್‍ಗೊಳಪಟ್ಟ ಸಾಂಬಾರ್‍ತೋಟ ಮಸೀದಿಯಲ್ಲಿ ಸೋಮವಾರ ಈದ್ ಹಬ್ಬ ಆಚರಿಸಲಾಯಿತು.

ಸಾಂಬಾರ್‍ತೋಟ ಮಸೀದಿ ಖತೀಬ್ ಪಿ.ಕೆ. ಮಹಮ್ಮದ್ ಮದನಿ ಖುತುಬಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,ಶಾಂತಿ, ಸೌಹಾರ್ದತೆಯ ನೆಲೆಬೀಡು ನಮ್ಮದಾಗಿದ್ದು, ಎಲ್ಲರೂ ಒಗ್ಗಟ್ಟಿನಿದ್ದುಕೊಂಡು ಸಡಗರದಿಂದ ಹಬ್ಬ ಆಚರಿಸಬೇಕೆಂದು ಕರೆ ನೀಡಿದರು.

ಜಮಾಅತ್ ಸಮಿತಿ ಅಧ್ಯಕ್ಷ ಎಸ್ .ಕೆ.ಖಾದರ್ ಹಾಜಿ, ಸದಸ್ಯರಾದ ಇಬ್ರಾಹಿಂ ಸಾಂಬಾರ್ ತೋಟ, ಹಸನ್ ಹಾಜಿ ಸಾಂಬಾರ್ ತೋಟ ಸೇರಿದಂತೆ ಜಮಾಅತ್ ಸದಸ್ಯರು ಸಂಭ್ರಮದಿಂದ ಈದ್ ಆಚರಣೆ ಮಾಡಿದರು. ಮುಡಿಪು ಸಂಯುಕ್ತ ಜಮಾಅತ್‍ಗೊಳಪಟ್ಟ ತೋಟಾಲ್, ಪಡಿಕಲ್, ಮುದುಂಗಾರುಕಟ್ಟೆ, ಮದ್ದಡ್ಕ ಸೇರಿದಂತೆ ಎಲ್ಲಾ ಮಸೀದಿಗಳಲ್ಲಿ ಸೋಮವಾರ ಸಂಭ್ರಮದಿಂಧ ಈದ್ ಆಚರಣೆ ನಡೆದಿದೆ.ಯಾವುದೇ ಅಹಿತಕರ ಘಟನೆ ಮುಡಿಪುವಿನಲ್ಲಿ ನಡೆದಿಲ್ಲ.

Exit mobile version