ಪಜೀರು: ಮನೆಯೊಂದರಲ್ಲಿ ಜಾನುವಾರುಗಳನ್ನು ಕಡಿಯುತ್ತಿದ್ದ ಮಾಹಿತಿ ಪಡೆದ ಸುಮಾರು 50 ಜನರ ಗುಂಪು ದಾಳಿ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಅಡ್ಕ ಎಂಬಲ್ಲಿ ನಡೆದಿದ್ದು, ಈ ವೇಳೆ ಮೂವರು ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಂiÀiಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ದೂರು ಮತ್ತು ಪ್ರತಿದೂರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಾಂಸ ಕೊಂಡೊಯ್ಯಲು ತಡರಾತ್ರಿ ರಿಕ್ಷಾ ಸಂಚಾರ ಅಧಿಕವಿದ್ದಾಗ, ಸಂಶಯಗೊಂಡ ಸ್ಥಳೀಯರು ಹಿಂದು ಸಂಘಟನೆಗೆ ಮಾಹಿತಿ ನೀಡಿದ್ದರು. ಅದರಂತೆ ಸುಮಾರು 50 ಮಂದಿಯ ತಂಡ ಮನೆಗೆ ದಾಳಿ ನಡೆಸಿ ಕಲ್ಲು, ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ರೂ. 50,000 ನಗದು ಕಳವುಗೈದಿದ್ದಾರೆಂದು ಆಸ್ಪತ್ರೆಯಲ್ಲಿ ದಾಖಲಾಗಿರುವವರು ಆರೋಪಿಸಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೋಕಿ ಡಿಸೋಜಾ ಅವರು ಸಾಕಿದ ಜಾನುವಾರುಗಳನ್ನೇ ಮಾರಾಟ ನಡೆಸಿ, ಮನೆಯಲ್ಲೇ ಮಾಂಸ ಮಾಡಲು ಮೂವರಲ್ಲಿ ತಿಳಿಸಿದ್ದರು. ಅದರಂತೆ ಮೂವರು ಎರಡು ದನಗಳನ್ನು ಕಡಿಯುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಹಿಂದು ಸಂಘಟನೆ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಡರಾತ್ರಿ 1.30ರ ಸುಮಾರಿಗೆ ಪೊಲೀಸ್ ಸಮ್ಮುಖದಲ್ಲೇ 50 ಮಂದಿಯ ತಂಡ ಜೋಕಿಂ ಅವರ ಮನೆಗೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅಸ್ಲಂ ಓಡಲು ಯತ್ನಿಸಿದ್ದು, ಸಮೀಪದಲ್ಲೇ ಇದ್ದ ಹೊಂಡಕ್ಕೆ ಬಿದ್ದು ಕೈ ಮತ್ತು ಕಾಲು ಮುರಿತಕ್ಕೊಳಗಾಗಿದ್ದಾನೆ. ಇತರೆ ಇಬ್ಬರ ಮತ್ತು ಮನೆಯ ಮಾಲೀಕರ ಮೇಲೆ ಯಾವುದೇ ರೀತಿಯ ಹಲ್ಲೆಯೂ ನಡೆದಿಲ್ಲ. ಅಲ್ಲಿದ್ದ ನಗದನ್ನು ಕಳವು ನಡೆಸಲಾಗಿಲ್ಲ. ಜಾನುವಾರುಗಳನ್ನು ಅಕ್ರಮವಾಗಿ ಮಾಂಸಕ್ಕಾಗಿ ಕಡಿಯುವುದರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಅಕ್ರಮವಾಗಿ ಅನುಮತಿಯಿಲ್ಲದೆ ಜಾನುವಾರು ಕಡಿಯುವುದರ ವಿರುದ್ಧ ಆಸ್ಪತ್ರೆಯಲ್ಲಿರುವ ಮೂವರ ಪ್ರಕರಣ ಇದ್ದು, ಮೂವರು ಕೊಣಾಜೆ ಪೊಲೀಸರ ವಶದಲ್ಲಿದ್ದಾರೆ. ಸ್ಥಳದಲ್ಲಿದ್ದ ರಿಕ್ಷಾ ಮತ್ತು ರಿಟ್ಝ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಎಸಿಪಿ ಶ್ರುತಿ, ಕೊಣಾಜೆ ಇನ್ಸ್ಪೆಕ್ಟರ್ ಅಶೋಕ್ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಮಾತ್ರವಲ್ಲದೆ ಸ್ಥಳದಲ್ಲಿ ಎರಡು ಕೆಎಸ್ಆರ್ಪಿ ಬಸ್ನೊಂದಿಗೆ ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಭದ್ರತೆಯನ್ನು ಒದಗಿಸಲಾಗಿದೆ.