ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಬೆಂಜನಪದವಿನಲ್ಲಿ ಬುಧವಾರ ನಡೆದ ಎಸ್‍ಡಿಪಿಐ ಅಧ್ಯಕ್ಷ ಅಶ್ರಫ್ ಕಲಾಯಿ ಅವರ ಹತ್ಯೆಯನ್ನು ಉಳ್ಳಾಲ ದರ್ಗಾಧ್ಯಕ್ಷ ರಶೀದ್ ಹಾಜಿ ಖಂಡಿಸಿದ್ದಾರೆ.
ರಿಕ್ಷಾ ಚಾಲಕರಾಗಿ ಮತ್ತು ಸಮಾಜ ಸೇವಕರಾಗಿ ದುಡಿಯುತ್ತಿದ್ದ ಅಶ್ರಫ್ ಕಲಾಯಿ ಅವರ ಹತ್ಯೆಯ ಸಂದರ್ಭದಲ್ಲಿ ಅವರನ್ನು ರೌಡಿಶೀಟರ್ ಎಂದು ಮಾಧ್ಯಮಗಳು ತಪ್ಪು ಮಾಹಿತಿಯನ್ನು ಹರಡಿರುವುದೂ ಖಂಡನೀಯವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.