Site icon Ullalavani

ಮೊಂಟೆಪದವು: ಅಕ್ರಮವಾಗಿ ಕಟ್ಟಿಡಲಾಗಿದ್ದ ಜಾನುವಾರು ಪೊಲೀಸ್ ವಶಕ್ಕೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮೊಂಟೆಪದವು : ಕಸಾಯಿಖಾನೆಗೆ ಸಾಗಿಸಲೆಂದು  ತೋಟದಲ್ಲಿ  ಅಕ್ರಮವಾಗಿ ಕಟ್ಟಲಾಗಿದ್ದ 12 ಜಾನುವಾರುಗಳನ್ನು  ಕೊಣಾಜೆ ಪೊಲೀಸರು  ಮೊಂಟೆಪದವು ಸಮೀಪ ವಶಕ್ಕೆ ಪಡೆದುಕೊಂಡು ಗೋಶಾಲೆಗೆ ಹಸ್ತಾಂತರಿಸಿದ್ದಾರೆ.

3 ಕರುಗಳು ಸೇರಿದಂತೆ 9  ದನಗಳನ್ನು ವಶಪಡಿಸಿಕೊಳ್ಳಲಾಗಿದೆ.  ಮೊಂಟೆಪದವು ಶಾಲೆ ಸಮೀಪದ ತೋಟವೊಂದರಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಿರುವ ಮಾಹಿತಿಯನ್ನು ಹಿಂದು ಸಂಘಟನೆ ಕೊಣಾಜೆ ಪೊಲೀಸರಿಗೆ ನೀಡಿತ್ತು. ಅದರಂತೆ ಕೊಣಾಜೆ ಪೊಲೀಸರು ಮೊಂಟೆಪದವು ಸಮೀಪಕ್ಕೆ ತೆರಳಿ  ಪರಿಶೀಲಿಸಿದಾಗ  ವಾರೀಸುದಾರರಿಲ್ಲದೆ ಜಾನುವಾರುಗಳನ್ನು ಕಟ್ಟಿಡಲಾಗಿತ್ತು.  ಕಳವುಗೈದು ಜಾನುವಾರುಗಳನ್ನು  ಕಸಾಯಿಖಾನೆಗೆ ಸಾಗಿಸಲು ಮುಂದಾಗಿದ್ದ ತಂಡ  ತೋಟದಲ್ಲಿ ಕಟ್ಟಿಡಲಾಗಿದೆ ಅನ್ನುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.  ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡು ಪಜೀರು ಗೋವನಿತಾಶ್ರಯಕ್ಕೆ  ಒಪ್ಪಿಸಿದ್ದಾರೆ.

Exit mobile version