ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಪಜೀರು : ಗೋವು ರಾಷ್ಟ್ರ ಪ್ರಾಣಿಯಾಗಿರುವುದು ಬೇಡ, ಆ ಸ್ಥಾನ ಹುಲಿಗೇ ಇರಲಿ, ಆದರೆ ಗೋವನ್ನು ರಾಷ್ಟ್ರ ಮಾತೆ ಎಂದು ಸರ್ಕಾರ ಘೋಷಿಸಬೇಕು ಎಂದು ಉತ್ತರ ಕಾಶಿ ಕಪಿಲಾಶ್ರಮದ ಸ್ವಾಮಿ ರಾಮಚಂದ್ರ ಅವರು ಅಭಿಪ್ರಾಯಪಟ್ಟರು.
ಪಜೀರು ಗೋವನಿತಾಶ್ರಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಸ್ಯಕಾಶಿಗೆ ಅಂಕುರಾರ್ಪಣೆ, ಬನಶಂಕರಿ ಆರಾಧನೆ ಹಾಗೂ ನೂತನ ಕೆರೆ ನಂದಿನಿ ಪುಷ್ಕರಣಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸಂಸ್ಕøತಿ ಮತ್ತು ಸಂಸ್ಕಾರ ಬಿಟ್ಟವರಿಂದ ಬೀಫ್ ಫೆಸ್ಟ್‍ನಂತಹ ಕಾರ್ಯಕ್ರಮಗಳು ನಡೆಯುತ್ತವೆ, ಭಾರತದೊಗಳಗೆ ಗೋವನ್ನು ಹತ್ಯೆ ಮಾಡುವವರು ದೇಶದ್ರೋಹಿಗಳು, ಇಂತಹ ಕೃತ್ಯ ಸಹಿಸಲಾಧ್ಯ, ಗೋಹತ್ಯೆ ನಿಂತಾಗ ಸಂಸ್ಕøತಿ ಮತ್ತು ಸಂಸ್ಕಾರ ಬೆಳೆಯುತ್ತದೆ, ಈ ಕಾರ್ಯ ಕೇಸರಿ ಶಾಲುಧಾರಿ ಸಂಘಟನೆಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮನುಷ್ಯನ ಜೀವನ ಚರಂಡಿಯಲ್ಲಿ ಹುಟ್ಟಿದ ಹುಳಗಳಂತಾಗಬಾರದು, ಯಾರಿಗಾದರೂ ಉಪಕಾರವಾಗುವ ಜೀವನವಾಗಬೇಕು. ಮನುಷ್ಯನಿಗೆ ಬದುಕುವ ಹಕ್ಕು ಇದೆ ಎಂದ ಮೇಲೆ ಗೋವುಗಳಿಗೂ ಇವೆ. ವಾಸ್ತವವಾಗಿ ಭಾರತಕ್ಕೆ ಚೀನಾ ದೊಡ್ಡ ಶತ್ರು. ಆದರೆ ನಾವಿಂದು ಪಾಕಿಸ್ತಾನವನ್ನು ವಿರೋಧಿಸುವ ಭರದಲ್ಲಿ ಚೀನಾ ದೇಶವನ್ನು ಸ್ವಾಗತಿಸುತ್ತಿದ್ದೇವೆ. ಚೀನಾವನ್ನು ವಿರೋಧಿಸಬೇಕಾದರೆ ಅಲ್ಲಿಂದ ಬರುವ ಮೊಬೈಲ್ ಸಹಿತ ಇತರ ವಸ್ತುಗಳಿಂದ ದೂರವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆರೆ ನಿರ್ಮಾಣಕ್ಕಾಗಿ ನೀರು ಇರು ಜಾಗ ಗುರುತಿಸಿದ ಸ್ಟೀವನ್ ಲಾಯ್ ಡಿಸೋಜ ಹಾಗೂ ಕೆಲಸ ನಿರ್ವಹಿಸಿದ ಗಿರಿಧರ್ ಅವರನ್ನು ಸನ್ಮಾನಿಸಲಾಯಿತು.
ಮಂಗಳ ಸೇವಾ ಸಮಿತಿಯ ಅಧ್ಯಕ್ಷ ಎಲ್.ಶ್ರೀಧರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ ಆಡಳಿತ ಮೊಕ್ತೇಸರ ವಿಶ್ವನಾಥ ಗಟ್ಟಿ ವಗ್ಗ, ಮನೋಹರ ತುಳಜಾರಾಮ್ ಟ್ರಸ್ಟಿಗಳಾದ ಡಾ.ಅನಂತ ಲಕ್ಷ್ಮೀ ಭಟ್, ಹಿತೇಂದ್ರ ಶಾ, ಇನೋಳಿ ಶ್ರೀ ಸೋಮನಾಥ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಗೋವನಿತಾಶ್ರಯ ಟ್ರಸ್ಟ್ ಸ್ಥಳೀಯ ಟ್ರಸ್ಟಿಗಳಾದ ರವಿ ರೈ ಪಜೀರು, ರಾಜೇಶ್ ಶೆಟ್ಟಿ ಪಜೀರುಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಪಿ.ಅನಂತಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮ್‍ರಾಜ್ ಪಾವೂರು ಕಾರ್ಯಕ್ರಮ ನಿರೂಪಿಸಿದರು.
`ಗೋವನಿತಾಶ್ರಯದಲ್ಲಿ ವಾರ್ಷಿಕ 6.76 ಲಕ್ಷ ಖರ್ಚು ಇದ್ದರೂ ದಾನಿಗಳಿಂದ ಭರಿಸಲಾಗುತ್ತಿದೆ, ದೇಶೀ ತಳಿ ಸಾಕಾಣೆ ಹಾಗೂ ಗೋಮಾತೆಗೆ ಯಥೇಚ್ಛ ಮೇವು ಮುಂದಿನ ಯೋಜನೆಯಾಗಿದ್ದು, ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ಯಾಚಿಸಿದ್ದೇವೆ, ರಾಜ್ಯ ಸರ್ಕಾರದಿಂದ ಬರಬೇಕಿದ್ದ 18 ಲಕ್ಷ ರೂಪಾಯಿ ಕೊನೆಗಳಿಗೆಯಲ್ಲಿ ಕೈತಪ್ಪಿದೆ’.
ಡಾ.ಪಿ.ಅನಂತಕೃಷ್ಣ ಭಟ್, ಗೋವನಿತಾಶ್ರ ಟ್ರಸ್ಟ್ ಕಾರ್ಯದರ್ಶಿ