Site icon Ullalavani

ಉಳ್ಳಾಲ್ತಿ ಅಮ್ಮನವರ ಮಾಡ ಮತ್ತು ಧರ್ಮಚಾವಡಿ ನಿರ್ಮಾಣದ ಶಿಲಾನ್ಯಾಸ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಣಾಜೆ: ಕೊಣಾಜೆ ಕಲ್ಲಿಮಾರು ಹೊಸಮನೆ ಬಳಿ ನಿರ್ಮಾಣಗೊಳ್ಳಲಿರುವ ಉಳ್ಳಾಲ್ತಿ ಅಮ್ಮನವರ ಮಾಡ ಮತ್ತು ಧರ್ಮಚಾವಡಿ ನಿರ್ಮಾಣದ ಶಿಲಾನ್ಯಾಸವು ತಂತ್ರಿಗಳಾದ ವೇದಮೂರ್ತಿ ವೆಂಕಟೇಶ್ ತಂತ್ರಿ ಎಡಪದವು ಮತ್ತು ಸುದರ್ಶನ್ ಭಟ್ ಸೇನೆರೆಪಾಲು ಪೌರೋಹಿತ್ಯದಲ್ಲಿ ನಡೆಯಿತು.

ಜಿರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು ಹೊಸಮನೆ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲ್ತಿ ಅಮ್ಮನವರ ಮಾಡ ನಿರ್ಮಾಣಗೊಳ್ಳಲಿದ್ದು ಮುಂದಿನ ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವದ ಸಂಕಲ್ಪ ಮಾಡಲಾಗಿದೆ.ಈ ಪುಣ್ಯ ಕಾರ್ಯದಲ್ಲಿ ಊರಿನ ಪರವೂರಿನ ಭಕ್ತರ ಸಹಕಾರ ಅಗತ್ಯ ಎಂದರು.

ಕೊಣಾಜೆ ಮುಲಾರ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ರೈ ಕಲ್ಲಿಮಾರುಗುತ್ತು, ಪ್ರ. ಕಾರ್ಯದರ್ಶಿ ರವೀಂದ್ರ ರೈ ಹರೇಕಳ, ಕೋಶಾಧಿಕಾರಿ ರವೀಂದ್ರ ಬಂಗೇರ, ದೈವ ಪಾತ್ರಿ ಐತ್ತಪ್ಪ ಪೂಜಾರಿ, ಗಟ್ಟಿ ಸಮಾಜದ ನಾಯ್ಗರ ಪ್ರತಿನಿಧಿ ಪದ್ಮನಾಭ ಗಟ್ಟಿ ಕಟ್ಟಪುಣಿ, ಪ್ರಮುಖರಾದ ರಾಜಾರಾಮ ರೈ ಕಲ್ಲಿಮಾರ್ ಹೊಸಮನೆ, ದೇವಪ್ಪ ಶೆಟ್ಟಿಗಾರ್, ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ದೇವದಾಸ್ ಶೆಟ್ಟಿ ಕಲ್ಲಿಮಾರ್‍ಗುತ್ತು, ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಎನ್. ಶೆಟ್ಟಿ, ವಿಜಯ ಲಕ್ಷ್ಮಿ ಪಿ. ರೈ, ಪೂರ್ಣಿಮಾ ಶೆಟ್ಟಿ ತಾಂಡ್ಲ, ರಮನಾಥ ಶೆಟ್ಟಿ ದುರ್ಗಾಂಬಾ, ಸುಂದರ ಕೊಟ್ಯಾನ್ ತಾಕಟೆ, ರಮಾನಾಥ ಶೆಟ್ಟಿ ಕಕ್ಕೆ ಮಜಲು,ಶೇಖರ ಕೊಪ್ಪಳ, ನರ್ಸುಗೌಡ, ವಾಸುದೇವ ಗಟ್ಟಿ ಕೊಣಾಜೆ, , ಪಂಚಾಯತ್ ಸದಸ್ಯರಾದ ರಾಮಚಂದ್ರ ಗಟ್ಟಿ ಮೇಲ್ತೋಟ, ವೇದಾವತಿ ಗಟ್ಟಿ, ಹರಿಶ್ಚಂದ್ರ ಶೆಟ್ಟಿಗಾರ್, ಗೋವಿಂದ ಗೌಡ, ರಾಮಚಂದ್ರ ಪದ್ಮಸಾಲಿ, ಸುಂದರ ಶೆಟ್ಟಿಗಾರ, ಹರಿಶ್ಚಂದ್ರ ಆಚಾರ್ಯ, ವಿಠಲ ಶೆಟ್ಟಿ ಮುಲಾರ, ಸುಜಾನಂದ ಶೆಟ್ಟಿಗಾರ್, ದೇವಣ್ಣ ಶೆಟ್ಟಿ , ಬೂಬಗಟ್ಟಿ, ಸುಹಾಸಿನಿ ಗಟ್ಟಿ ಕೂಟತ್ತಾಜೆ, ದಯಾನಂದ ಶೆಟ್ಟಿಗಾರ್, ಹೃತೇಶ್ ಶೆಟ್ಟಿ, ಭುಜಂಗ ಗಟ್ಟಿ ಕಟ್ಟಪುಣಿ, ಸುರೇಂದ್ರ ಶೆಟ್ಟಿ ಮಂಚಿಲ, ಹರೀಶ್ ಕೊಣಾಜೆ, ಸುರೇಂದ್ರ ಪೂಜಾರಿ ಬೊಳ್ಳೆಕುಮೇರು ಮತ್ತಿತರರು ಉಪಸ್ಥಿತರಿದ್ದರು.

Exit mobile version