Site icon Ullalavani

ವಿಸ್ಡಂ ವೆಲ್ಫೇರ್ ನಿಂದ ಮದರಸ ವಿದ್ಯಾರ್ಥಿ ಗಳಿಗೆ ಉಚಿತ ಪುಸ್ತಕ ವಿತರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮುಡಿಪು: ವಿಸ್ಡಂ ವೆಲ್ಪೇರ್ ಅಸೋಸಿಯೇಶನ್ ಮುಡಿಪು ಸಾಂಬಾರತೋಟ ವತಿಯಿಂದ ಶಾಲಾ ಹಾಗೂ ಮದ್ರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಸಾಂಬಾರತೋಟದಲ್ಲಿ ನಡೆಯಿತು.

ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಸಾಂಬಾರತೋಟದ ವಿದ್ಯಾರ್ಥಿಗಳಿಗೆ ನೂರಾನಿ ಜುಮಾ ಮಸೀದಿ ಖತೀಬರು ಪಿ.ಕೆ.ಮುಹಮ್ಮದ್ ಮದನಿ ಪುಸ್ತಕ ವಿತರಿಸಿದರು. ಬಳಿಕ ಮಾತನಾಡಿದ ಅವರು ರಂಝಾನ್ ತಿಂಗಳಲ್ಲಿ ದಾನ-ಧರ್ಮ ಮಾಡುವುದು ದೇವರು ಇಷ್ಟಪಡುವ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ವಿಸ್ಡಂ ವೆಲ್ಪೇರ್ ಅಸೋಸಿಯೇಶನ್‍ರವರ ಕಾರ್ಯಕ್ರಮವು ಶ್ಲಾಘನೀಯವಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಬಿನು ಅಬ್ದುಲ್ಲಾ, ಕಾರ್ಯಾಧ್ಯಕ್ಷರು ಆಸ್ಟಿನ್, ನೂರಾನಿ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಮ್, ಪ್ರಧಾನ ಕಾರ್ಯದರ್ಶಿ ಎಸ್.ಇ.ಮಹಮ್ಮದ್, ಮಾಜಿ ಉಪಾಧ್ಯಕ್ಷರು ಮೊೈದಿನ್ ಕುಂಞ, ಖದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಅಧ್ಯಕ್ಷ ಎಚ್.ಎಮ್.ಶಾಹುಲ್ ಹಮೀದ್,ಉದ್ಯಮಿ ಅಬ್ದುಲ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬೂಬಕರ್ ಕೊಡಕ್ಕಲ್, ಎ.ನಾಸೀರ್ ಅರಫಾ ಸಾಂಬಾರತೋಟ, ಸಲಾಮ್ ಸಾಂಬಾರತೋಟ, ಶಿಯಾಬ್ ಸಂಬಾರತೋಟ, ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಸಾಂಬಾರತೋಟ ಅಧ್ಯಾಪಕ ಶ್ರೀ ನೀಲಯ್ಯ, ವಿಸ್ಡಂ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷ ಶಾಹುಲ್ ಹಮೀದ್, ಜೊತೆಕಾರ್ಯದರ್ಶಿ ಇಶಾಮ್,ಸದಸ್ಯರಾದ ಬಾತೀಶ್,ಇಬ್ರಾಹಿಮ್, ಶಂಶುದ್ದೀನ್ ಉಪಸ್ಥಿತರಿದ್ದರು.
ಧಾರ್ಮಿಕ ಕ್ಷೇತ್ರದಲ್ಲಿ ಮದನಿ ಪದವಿ ಪಡೆದ ಮಹ್‍ರೂಫ್ ಮದನಿಯವರನ್ನು ಸನ್ಮಾನಿಸಲಾಯಿತು.

ವಿಸ್ಡಂ ವೆಲ್ಪೇರ್ ಅಸೋಸಿಯೇಶನ್ ವಕ್ತಾರ ಮುಹಮ್ಮದ್ ಅಸ್ಗರ್ ಸ್ವಾಗತಿಸಿದರು, ಖಜಾಂಜಿ ರಿಯಾಝ್.ಯು.ಕೆ ಕಾರ್ಯಕ್ರಮ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅನೀಝ್ ವಂದಿಸಿದರು.

Exit mobile version