Site icon Ullalavani

ಅಶೋಕನಗರ ಫ್ರೆಂಡ್ಸ್ ವತಿಯಿಂದ ಉಚಿತ ಪುಸ್ತಕ ವಿತರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮಂಗಳೂರು: ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಸಂಘಟನೆಗಳು ಮಕ್ಕಳಿಗೆ ಉತ್ತೇಜನ ನೀಡುವುದರ ಜತೆಗೆ ಭವಿಷ್ಯದಲ್ಲಿ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬರುವಂತೆ ಮಾಡುವ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಮಹಾನಗರ ಪಾಲಿಕೆಯ ಅಶೋಕನಗರ ವಾರ್ಡಿನ ಕಾರ್ಪೊರೇಟರ್ ರಾಧಾಕೃಷ್ಣ ಹೇಳಿದರು.


ಅವರು ಅಶೋಕನಗರದಲ್ಲಿ ಅಶೋಕನಗರ ಫ್ರೆಂಡ್ಸ್ ವತಿಯಿಂದ ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರಗಿದ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಗಗರ ಯೋಜನಾ ಅಧಿಕಾರಿ ಗುರುಪ್ರಸಾದ್, ಉದ್ಯಮಿಗಳಾದ ಕಿಶೋರ್ ಕುಮಾರ್ ದಂಡಕೇರಿ, ಕೇಶವ.ಬಿ, ಅಶೋಕನಗರ ಹಿ.ಪಾ.ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ರಾವ್, ಉದ್ಯಮಿ ರಮೇಶ್ ಕೋಟ್ಯಾನ್, ಹಳೇ ವಿದ್ಯಾರ್ಥಿ ಪ್ರಶಾಂತ್ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭ ಈ ಸಂದರ್ಭ ರಾಷ್ಟ್ರಪತಿ ಪದಕ ವಿಜೇತ ನಿವೃತ್ತ ಉಪ ಪೊಲೀಸ್ ಕಮಿಷನರ್ ಡಿ.ಧರ್ಮಯ್ಯ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಶೇ. 95.5 ಅಂಕ ಪಡೆದ ಕೃಪಾಲಿ ಎನ್. ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು.

ಅಶೋಕನಗರ ಫ್ರೆಂಡ್ಸ್ ಇದರ ಅಧ್ಯಕ್ಷ ರಾಕೇಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರವೀಣ್ .ಎಸ್.ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.

Exit mobile version