Site icon Ullalavani

ಯೆನೆಪೋಯ ವಿ.ವಿ ಯಲ್ಲಿ ವಿಶ್ವಪರಿಸರ ದಿನ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಯೇನೆಪೋಯ ವಿಶ್ವವಿದ್ಯಾನಿಲಯವು ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಅಧ್ಯಯನ ಕೇಂದ್ರ, ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಪರಿಸರ ದಿನದ ಘೋಷಣೆಯಾದ ನಿಸರ್ಗದೊಂದಿಗೆ ಜನ ಜೋಡಣೆ ಈ ವಿಷಯದ ಮೇಲೆ ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕ ಡಾ| ಭಾಗ್ಯ ಬಿ. ಶರ್ಮ ಇವರು ಮಂಗಳೂರು ಆಕಾಶವಣಿಯ ವನಿತಾವಾಣಿಯಲ್ಲಿ ನೇರ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪರಿಸರವನ್ನು ರಕ್ಷಿಸಲು ಎದುರಾಗುವ ಸವಾಲುಗಳು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮಹತ್ವ, ಪರಿಸರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ, ಸ್ಥಳೀಯ ಆಹಾರ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಈ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅವರು ಈ ಕಾರ್ಯಕ್ರಮದಲ್ಲಿ ನೀಡಿದರು. ಪರಿಸರ ಶಿಕ್ಷಣದ ಪ್ರಾಮುಖ್ಯತೆ, ತೋಟಗಾರಿಕೆ ಮತ್ತು ಪಕ್ಷಿ ವೀಕ್ಷಣೆಯಂತಹ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಪರಿಸರದಲ್ಲಿ ಒಂದಾಗಿ ಸುಸ್ಥಿರತೆಗೆ ಪೂರಕವಾಗಲಿದೆ. ವಿದ್ಯಾರ್ಥಿಗಳಿಂದ ವಿಶ್ವವಿದ್ಯಾನಿಲಯದ ಆವರಣ ಸ್ವಚ್ಚತಾ ಅಭಿಯಾನ ಹಾಗೂ ಗಿಡನೆಡುವ ಕಾರ್ಯಕ್ರಮವು ರಾಷ್ಟ್ರಿಯ ಸೇವಾ ಯೋಜನಾ ಘಟಕದೊಂದಿಗೆ ಜಂಟಿಯಾಗಿ ನಡೆಸಲಾಯಿತು. ನಿಸರ್ಗದೊಂದಿಗೆ ಜನ ಜೋಡಣೆ ಈ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ತೆಂಗಿನ ಮರ ಬೇರು ಸಹಿತ ಸ್ಥಳಾಂತರಕ್ಕೆ ತೋಟಗಾರಿಕೆ ಇಲಾಖೆಯ ವಸಂತ್ ಸಹಕರಿಸಿದರು.

Exit mobile version