Site icon Ullalavani

ಆತ್ಮಶಕ್ತಿ ಸಹಕಾರಿ ಸಂಘದ ದ್ವಿತೀಯ ವಾರ್ಷಿಕೋತ್ಸವ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ಜರಗಿತು.

ಸಂಘದ ಹಿರಿಯ ಸದಸ್ಯ ಯು ಕೃಷ್ಣೋಜಿ ಕೆ. ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಸದಸ್ಯರಾದ ಗೋಪಾಲ್ ಯು ಕೆ ಮಾತನಾಡಿ ಸಂಘದಲ್ಲಿ ಸದಸ್ಯರು ತನ್ನ ಅವಶ್ಯಕತೆಗೆ ತಕ್ಕಂತೆ ಸಾಲವನ್ನು ಮರುಪಾವತಿಸಿದರೆ ಸಂಘದ ಬೆಳವಣಿಗೆ ಜತೆ ಸದಸ್ಯರು ಕೂಡ ತನ್ನ ಅವಶ್ಯಕತೆಯನ್ನು ಪೂರೈಸಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಮಾತನಾಡಿ, ಉಳ್ಳಾಲ ಶಾಖೆಯು ಎರಡು ವರ್ಷದ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿ ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಈ ಯಶಸ್ಸು ಅಭಿವೃದ್ದಿಗೆ ಕಾರಣಿಭೂತರಾದ ಎಲ್ಲರನ್ನು ಸ್ಮರಿಸಿ, ಗ್ರಾಹಕರು ಪಡೆದ ಸೇವೆಯೆ ಈ ಬೆಳವಣಿಗೆಗೆ ಸ್ಪೂರ್ತಿ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಆನಂದ ಎಸ್ ಕೊಂಡಾಣ, ಚಂದ್ರಹಾಸ್ ಮರೋಳಿ, ಸುಜಯ ಹೇಮಚಂದ್ರ, ಕುಶಲಾಕ್ಷಿ ಯಶವಂತ್, ಸಲಹಾ ಸಮಿತಿ ಸದಸ್ಯರಾದ ಗೋಪಾಲ್ ಯು ಕೆ, ಪುರುಷೋತ್ತಮ್ ಕೆ, ಜನಾರ್ಧನ್ ಉಳ್ಳಾಲ್, ಉದಯ್ ಕುಮರ್ ಆರ್ ಕೆ, ಜಗದೀಶ್ ಗೋಳಿಯಾಡಿ, ದೇವಕಿ ಆರ್ ಉಳ್ಳಾಲ್ ಮತ್ತು ಚಿತ್ರಾಕ್ಷಿ ಭಾಸ್ಕರ್ ಉಪಸ್ಥಿತರಿದ್ದರು.

ಸಂಘದ ಶಾಖಾಧಿಕಾರಿ ಸೌಮ್ಯಲತ ಸ್ವಾಗತಿಸಿದರು. ರಾಕೇಶ್ ಮರೋಳಿ ವಂದಿಸಿದರು. ಶಾಖಾ ಸಿಬಂದಿ ಸಚಿನ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version