ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ:ಸುನ್ನೀ ಸೆಂಟರ್ ಅಳೇಕಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ವಿ ಎಸ್ ವತಿಯಿಂದ ಪ್ರಪ್ರಥಮ ಬಾರಿಗೆ ಅಳೇಕಲ ಕರಿಯ ಮಟ್ಟದ ಕುರ್ಆನ್ ತಜ್ವೀದ್ ಸ್ಪರ್ಧೆಯು ಅಳೇಕಲ ಜುಮಾ ಮಸೀದಿಯಲ್ಲಿ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸೆಯ್ಯದ್ ಜಲಾಲ್ ತಂಙಳ್ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಳೇಕಲ ಜುಮಾ ಮಸೀದಿಯ ಖತೀಬರಾದ ಅಲ್ಹಾಜ್ ಅಬೂಝಿಯಾದ್ ಪಟ್ಟಾಂಬಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಳೇಕಲ, ಮಂಚಿಲ, ಮಾರ್ಗತ್ತಲೆ ಮತ್ತು ಹಲೆಕೋಟೆಯ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಹನೀಫ್ ಸಅದಿ ಉಸ್ತಾದರು ಮತ್ತು ಹಫೀಝ್ ಅಲ್ ಫಾಳಿಲಿ ಉಸ್ತಾದ್ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸೆಯ್ಯದ್ ಝಾಹಿರ್ ತಂಙಳ್, ದ್ವಿತೀಯ ಸ್ಥಾನ ನಿಹಾಲ್ ಮತ್ತು ತ್ರತೀಯ ಸ್ಥಾನವನ್ನು ಮುಹಮ್ಮದ್ ಕೈಸ್ ಪಡೆದರು. ಕಾರ್ಯಕ್ರಮದ ಉಸ್ತುವಾರಿಯನ್ನು ಶರೀಫ್ ಸಾದುಹಿತ್ಲು ಮತ್ತು ಫಾಝಿಲ್ ಅಳೇಕಲ ವಹಿಸಿದ್ದರು. ಶಂಸುದ್ದೀನ್ ಕಾರ್ಯಕ್ರಮವನ್ನು ಸ್ವಾಗತಿಸಿ ಅನ್ಸಾರ್ ಅಳೇಕಲ ನಿರೂಪಿಸಿದರು. ಆರಿಫ್ ಅಳೇಕಲ ಧನ್ಯವಾದಗೈದರು.