ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ರಂಝಾನ್ ಉಪವಾಸದ ಸಮಯದಲ್ಲಿ ಬಡವರಿಗೆ ನೀಡುವ ದಾನಕ್ಕೆ ಬಹಳಷ್ಟು ಮಹತ್ವತೆ ಇದೆ. ಇಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮ ಏರ್ಪಡಿಸಿದರೆ ಅದು ಯಶಸ್ವಿ ಕಾಣಲು ಸಾಧ್ಯ ಎಂದು ಎಸ್.ವೈ.ಎಸ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಖಾದರ್‍ಸಖಾಫಿ ಕಾಟಿಪ್ಪಾರ ಹೇಳಿದರು.
ರಂಜಾನ್ ತಿಂಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಮತ್ತು ಆರಾಧನೆಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.
ಅವರು ಸಮಸ್ತ ಕೇರಳ ಸುನ್ನೀ ಯುವಜನ ಸಂಘ ಬಾಕ್ರಬೈಲ್ ಸರ್ಕಿಲ್ ಸಮಿತಿಯ ಆಶ್ರಯದಲ್ಲಿ ಬದಿಮಾಲೆ ಪಾತೂರಿನಲ್ಲಿ ರಂಜಾನ್ ಪ್ರಯುಕ್ತ ನಡೆದ ರಂಜಾನ್ ಸಂದೇಶ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ವೈಎಸ್ ಬಾಕ್ರಬೈಲ್ ಸರ್ಕಿಲ್ ಸಮಿತಿಯ ಉಪಾಧ್ಯಕ್ಷ ಶರೀಫ್ ಸಅದಿ ನೆರವೇರಿಸಿದರು.ಪಾತೂರು ಮಸೀದಿ ಖತೀಬ್ ಅಬೂಬಕರ್ ಸಿದ್ದೀಕ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‍ವೈಎಸ್ ಬಾಕ್ರಬೈಲ್ ಸರ್ಕಿಲ್ ಕಾರ್ಯದರ್ಶಿ ರಫೀಕ್ ಲತೀಫಿ ಸ್ವಾಗತಿಸಿದರು.ಮಹಮ್ಮದ್ ಸಖಫಿ ಧನ್ಯವಾದ ಸಮರ್ಪಿಸಿದರು.