ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‍ಗೆ ಶೇ 100 ಪಲಿತಾಂಶ
UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‍ನ ಸಿಬಿಎಸ್‍ಸಿ ಪರೀಕ್ಷೆಗೆ ಹಾಜರಾದ ಎಲ್ಲಾ 83 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 100 ಪಲಿತಾಂಶ ದಾಖಲಾಗಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಹರ್ಷಿತಾ ಎನ್. ಶೆಟ್ಟಿಗಾರ್, ಕವನ, ಜೀತನ್ ಪ್ರೆನೋಲ್ ವಿನ್ಸೆಂಟ್ ಡಿ.ಸೋಜ, ಶೃಜನ್‍ರಾಜ್ ಶೆಟ್ಟಿ 10 ಅಂಕಗಳನ್ನು ಪಡೆದಿದ್ದು, ರೆನ್ವಿಲ್ ಡಿ.ಸೋಜಾ(9.8), ಅಶಿಯಾ ನಿಶ್ಮಾ (9.8), ಕೀರ್ತಿ ರೋಹಿತ್ ಗಟ್ಟಿ (9.8), ಮಹಮ್ಮದ್ ಆಶಿಕ್ ರಹಿಮಾನ್ (9.8), ವರ್ಷಾ ಆರ್. ಶೆಟ್ಟಿ (9.6), ಅಶಿಯಾ ಝಿಯಾ (9.4), ಫಿದಾ ರುಕಿಯಾ(9.4), ಪ್ರೇಕ್ಷಾ ಎನ್.ವಿ.(9.2), ಜೀವನ್ ರೋಯ್ಟನ್ ಡಿ.ಸೋಜ (9.2), ಎಂ. ಸುಶಾಂತ್ ಎಸ್. ನಾಯಕ್ (9.2), ಅಯಿಶತ್ತುಲ್ ಅನ್ವೀಜಾ (9.0), ಫಾತಿಮಾ ತಸ್ಮಾ (9.0) ಅಂಕಗಳನ್ನು ಪಡೆದಿದ್ದಾರೆ, 14 ವಿದ್ಯಾರ್ಥಿಗಳು 8.8 ರಿಂದ 8 ಅಂಕಗಳನ್ನು ಪಡೆದಿದ್ದು 16 ವಿದ್ಯಾರ್ಥಿಗಳು 7.8 ರಿಂದ 7 ಅಂಕಗಳನ್ನು ಪಡೆದಿದ್ದಾರೆ ಹಾಗೂ 23 ವಿದ್ಯಾರ್ಥಿಗಳು 6.8 ರಿಂದ 6 ಅಂಕಗಳನ್ನು 14 ವಿದ್ಯಾರ್ಥಿಗಳು 5.8 ರಿಂದ 5 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಮತ್ತು ಕಣಚೂರು ಪಬ್ಲಿಕ್ ಸ್ಕೂಲ್ ಶಿಕ್ಷಕರನ್ನು ಕಣಚೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು ಮತ್ತು ನಿರ್ದೇಶಕ ಅಬ್ದುಲ್ ರಹೆಮಾನ್ ಅಭಿನಂದಿಸಿದ್ದಾರೆ.