Site icon Ullalavani

ಬಿಲ್ಲವ ಸೇವಾ ಸಮಾಜ ಕೊಲ್ಯ :ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಬಿಲ್ಲವಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆಯ ಕಾರ್ಯಕ್ರಮವು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಡಾ| ಅಮಿತ್ ರಾಜ್ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಹಾಗೂ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇದು ಉಳಿದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದೆ ಬರಲು ಪ್ರೇರಣೆಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಲಪಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರತಿಭಾ ವಿಶ್ವನಾಥ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಟ್ರಾನ್ಸ್ ಪೋಟ್ರ್ಸ್ ಪಣಂಬೂರಿನ ಹರೀಶ್ ಉಳ್ಳಾಲ ಬೈಲು, ಕರ್ಣಾಟಕ ಬ್ಯಾಂಕ್‍ನ ಅಧಿಕಾರಿ ಮಯೂರ್ ಜಿ.ಕೆ. , ಬ್ರಹ್ಮಶ್ರೀ ನಾರಾಯಣ ಗುರು ಯುವ ಸಂಚಲನ ಬೆಳರಿಂಗೆ ಕಿನ್ಯ ಇದರ ಸ್ಥಾಪಕ ಅಧ್ಯಕ್ಷ ಜಯಂತ ಎಂ. ಪೂಜಾರಿ, ಕಿಚನ್ ವಲ್ರ್ಢ್ ಮಂಗಳೂರು ಇದರ ಮಾಲಕ ಜಯಂತ್ , ಶ್ರೀ ದುರ್ಗಾ ಫುಡ್ ಬೈಕಂಪಾಡಿ ಇದರ ಮಾಲಕ ಪ್ರವೀಣ್ ಚಂದ್ರ ಬಿ. ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಈಶ್ವರ ಸುವರ್ಣ ಕನೀರುತೋಟ, ಗೌರವಾಧ್ಯಕ್ಷ ಡಾ| ಪಿ. ರಾಮಾನುಜಂ ಯುವ ವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಸುರೇಶ್ ಬಿ. ನಾರಾಯಣಗುರು ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾವತಿ ಮಾಧವ, ಗೌರವ ಅಧ್ಯಕ್ಷೆ ವಿಶಾಲಾಕ್ಷಿ ಜೆ. ಸೋಮೇಶ್ವರ ಉಪಸ್ಥಿತರಿದ್ದರು. ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಜ್ಯೋತಿ ಪ್ರಭಾ ಎಸ್. ಅನುಷಾ ಹಾಗೂ ನವ್ಯ ಇವರನ್ನು ಅಭಿನಂದಿಸಲಾಯಿತು.

35 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಸಂಘದ ಅಧ್ಯಕ್ಷ ಈಶ್ವರ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ವೇಣುಗೋಪಾಲ್ ಕೊಲ್ಯ ವಿದ್ಯಾರ್ಥಿ ವೇತನ ಪಡೆದ ಮಕ್ಕಳ ವಿವರ ನೀಡಿದರು. ಕೋಶಾಧಿಕಾರಿ ಸೀತಾರಾಮ ಎಸ್. ಕರ್ಕೇರ ವಂದಿಸಿದರು. ಡಿ.ಎನ್. ರಾಘವ ಕಾರ್ಯಕ್ರಮ ನಿರೂಪಿಸಿದರು.

Exit mobile version