ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೈರಂಗಳ: ಸಸ್ಯಗಳಿಲ್ಲದೇ ನಮಗೆ ಬದುಕಿಲ್ಲ, ದೇಶದ ಉಳಿವಿಗೆ ಸಸ್ಯ ಸಂಪತ್ತು ಉಳಿಯಬೇಕು, ಬೆಳೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕೆಂದು ಖ್ಯಾತ ವಿಜ್ಞಾನಿ ಪಟಿಕಲ್ಲು ಶಂಕರ ಭಟ್ ಕರೆ ನೀಡಿದರು.
ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಂಕರ ಭಟ್‍ರವರು ಪ್ರಕೃತಿಯಲ್ಲಿ ಗಿಡಮರಗಳು ಜನರ ಜೀವನಕ್ಕೆ ಹೇಗೆ ಸಹಕಾರಿಯಾಗುತ್ತವೆ ಎಂದು ಹೇಳಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಸಂಚಾಲಕರು ವನಮಹೋತ್ಸವದಂದು ನೆಟ್ಟ ಗಿಡಗಳನ್ನು ವಿದ್ಯಾರ್ಥಿಗಳು ದತ್ತು ಪಡೆದುಕೊಂಡು ಅವುಗಳನ್ನು ಸಂರಕ್ಷಿಸುವ ಜವಬ್ಧಾರಿ ಹೊತ್ತಕೊಳ್ಳುವಂತೆ ಕರೆ ನೀಡಿದರು.
ಶಾಲಾ ಮುಖ್ಯೋಪಧ್ಯಾಯ ಎಂ. ಸೋಮಶೇಖರ್ ವಂದಿಸಿದರು. ಹಸಿರು ಪಡೆಯ ಸಂಚಾಲಕರಾದ ಉಪನ್ಯಾಸಕಿ ದಿವ್ಯದೀಪ ಇವರ ಸಂಚಾಲನೆಯಲ್ಲಿ ಕಾರ್ಯಕ್ರಮ ನೆರವೇರಿತು.
ಶಾಲೆಯ ಉಪನ್ಯಾಸಕ ವೃಂದ, ಶಿಕ್ಷಕ ವೃಂದದವರು ಹಾಗೂ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ ಮಾಡಿಕೊಟ್ಟರು.