Site icon Ullalavani

ಝೆನಿತ್ ಶಾಲೆ ಮುಡಿಪುವಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಮುಡಿಪು:ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಅತ್ಯಂತ ಮಹತ್ವಾಗಿದ್ದು, ದೇಶದ ಜವಾಬ್ದಾರಿಯ ಜತೆಗೆ ಪರಿಸರದ ಹೊಣೆಗಾರಿಯನ್ನು ವಿದ್ಯಾರ್ಥಿ ಯುವಜನರು ಸಮರ್ಥವಾಗಿ ನಿರ್ವಹಿಸದಿದ್ದಲ್ಲಿ  ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಝೆನಿತ್ ಎಜುಕೇಶನಲ್ ಮತ್ತು ಚಾರಿಟೇಬಲ್ ಅಧ್ಯಕ್ಷರಾದ ಮಜೀದ್ ಎನ್ ಅಭಿಪ್ರಾಯಪಟ್ಟರು.

ಅವರು ಮುಡಿಪುವಿನ ಝೆನಿತ್ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಮೂಲಕ ಆಚರಿಸಲಾಯಿತು.

ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಶಾಲಾ ಸಂಚಾಲಕರಾದ ನಹಾದ ಎಂ, ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ, ಸದಸ್ಯರಾದ ಬಶೀರ್ ಹಾಗೂ ಹನೀಫ್, ಮುಖ್ಯ ಶಿಕ್ಷಕರಾದ ಕ್ಯಾಥರೀನ್ ಡಿ ಸೋಜ, ಸಹಶಿಕ್ಷಕರಾದ ಮುಹಮ್ಮದ್ ಮನಾಝಿರ್ ಎಂ.ಎ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Exit mobile version