Site icon Ullalavani

ತೊಕ್ಕೊಟ್ಟು ಸ್ಮಾಟ್ ಸಿಟಿಯಲ್ಲಿ ಭದ್ರತೆ ಒದಗಿಸಲು ಮನವಿ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತೊಕ್ಕೊಟು: ರಂಜಾನ್ ತಿಂಗಳ ಅವಧಿಯಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನೂಕೂಲವಾಗುವ ದೃಷ್ಟಿಯಲ್ಲಿ ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್‍ನಲ್ಲಿರುವ ಎಲ್ಲಾ ಮಳಿಗೆಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ ಜೂನ್ ತಿಂಗಳಿನಲ್ಲಿ ಗ್ರಾಹಕರ ಅನೂಕೂಲಕ್ಕಾಗಿ ಅಂಗಡಿ, ಮಳಿಗೆಗಳನ್ನು ಆದಷ್ಟು ತಡರಾತ್ರಿಯವರೆಗೆ ತೆರೆದಿಟ್ಟು ವ್ಯಾಪಾರ ವಹಿವಾಟುಗಳನ್ನು ನಡೆಸುವಂತೆ ಅನುಮತಿಯನ್ನು ನೀಡುವಂತೆ ತೊಕ್ಕೊಟ್ಟಿನ ಸ್ಮಾಟ್ ಸಿಟಿ ಟ್ರೇಡ್ ಅಸೋಶಿಯೇಶನ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ವರ್ತಕರ ಸಂಘದ ಅಧ್ಯಕ್ಷ ನಾಸೀರ್ ಅಹಮ್ಮದ್ ಸಾಮಣಿಗೆ, ಕಾರ್ಯದರ್ಶಿ, ಜೈನುಧಿನ್ ಉದ್ಯಮಿಗಳಾದ ಯು,ಎಚ್, ತೌಫೀಕ್, ಸುಹೇಬ್, ಆಲಿಜಾ ಖಲೀಲ್ ಯಾಸೀರ್, ಝಿರಾರ್, ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.

Exit mobile version