Site icon Ullalavani

ಕೋಟೆಕಾರು ಸ್ವಚ್ಛತಾ ಅಭಿಯಾನ

ಉಳ್ಳಾಲ ನ್ಯೂಸ್ ನೆಟವರ್ಕ್

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿದ್ದ ತ್ಯಾಜ್ಯವನ್ನು ಪಂಚಾಯತ್ ಪ್ರತಿನಿಧಿಗಳು ಸೇರಿದಂತೆ ಸ್ಥಳಿಯರ ಸಹಕಾರದೊಂದಿಗೆ ಸ್ವಚ್ಛ ಮಾಡಿ ಆ ಸ್ಥಳದಲ್ಲಿ ಮರಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚಾರಣೆಯ ಆಚರಿಸಲಾಯಿತು.

ಕೆ.ಸಿ.ರೋಡು ರಸ್ತೆಯ ಬದಿಯಿಂದ ಪ್ರಾರಂಭಗೊಂಡು ಕೋಟೆಕಾರು, ಬೀರಿ, ಮಾಡೂರು, ಮಾಡ್ಯಾರ್, ಪನೀರ್, ಕನೀರ್ ತೋಟ, ದೇರಳಕಟ್ಟೆ ಜಲಾಲ್ ಭಾಗ್, ಹಾಗೂ ನಿಟ್ಟೆ ಆಸ್ವತ್ರೆಯ ರಸ್ತೆ ಮೊದಲಾದ ಕಡೆಗಳಿಂದ ನಾಗರಿಕರು ವಾಹನಗಳಲ್ಲಿ ತಂದು ಗಂಟು ಮೂಟೆಗಳ ತ್ಯಾಜ್ಯವನು ರಸ್ತೆಯ ಪಕ್ಕದ ಚರಂಡಿಗಳಿಗೆ ಎಸೆದು ಹೋಗಿದ್ದವುಗಳನ್ನು ಹೆಕ್ಕಿ ಶುಚಿಗೊಳಿಸಿ ಅವುಗಳನ್ನು ರಾಶಿಮಾಡಿಕೊಂಡು ಟಿಪ್ಪರ್‍ಗಳಿಗೆ ಜೆ.ಸಿ.ಬಿ ಯಿಂದ ತುಂಬಿಸಿಕೊಂಡು ಎಲ್ಲಾ ಪ್ರದೇಶಗಳನ್ನು ಸ್ವಚ್ಛಮಾಡಲಾಯಿತು.

ಈ ವೇಳೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾದ ಪೂರ್ಣಕಲಾ ಮಾತಾನಾಡಿ ಪರಿಸರವು ನಮಗೆ ಪ್ರಕೃತಿದತ್ತವಾದ ಕೊಡುಗೆಯಾಗಿದ್ದು ಅದನ್ನು ಅಂದ ಚೆಂದ ಮತ್ತು ಸ್ವಚ್ಚವಾಗಿಡುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಹೇಗೆ ಸಮಾಜದ ಮುಂದೆ ಅಂದವಾಗಿ ಸ್ವಚ್ಚವಾಗಿರುತ್ತೇವೆಯೊ, ಅದೇ ರೀತಿಯಲಿ ನಮ್ಮ ಪರಿಸರವನ್ನು ಸ್ವಚ್ಚವಾಗಿಡುವ ಸಂಕಲ್ಪವನು ಇಂದಿನಿಂದಲೇ ಮಾಡಿಕೊಂಡಲ್ಲಿ ನಾವು ಆರೋಗ್ಯಕರ ಪರಿಸರದಲ್ಲಿ ಆರೋಗ್ಯಕರವಾಗಿ ಬದುಕಲು ಮತ್ತು ಮುಂದಿನ ಪೀಳಿಗೆಗೆ ನಾವು ಕೊಡುವ ಮಹತ್ವವಾದ ಕೊಡುಗೆ ಆಗಿದೆ ಎಂಬ ಸಂದೇಶದ ಮಾತುಗಳಾಡಿದರು.

ಈ ವೇಳೆ ದ.ಕ. ಜಿಲ್ಲಾ ಮುಖ್ಯಾಧಿಕಾರಿಗಳು, ತಾಲೂಕು ಪಂಚಾಯತ್ ಅಧ್ಯಕ್ಷರು, ಕೋಟೆಕಾರು ಪಟ್ಟಣ ಪಂಚಾಯತ್ ಕಿರಿಯ ಅಭಿಯಂತರಾದ ರೇಣುಕಾ, ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಮಾಡೂರು ಪ್ರದೇಶದ ಕೌನ್ಸಿಲರ್ ಹಮೀದ್ ಹಸನ್ ಮಾಡೂರು, ದೇರಳಕಟ್ಟೆ ಕೌನ್ಸಿಲರ್ ಡಿ.ಎಂ.ಮಹಮ್ಮದ್ ಪುಷ್ಟಿ, ಅಜಿನಡ್ಕ ಕೌನ್ಸಿಲರ್ ಸುಮತಿ ಹಾಗೂ ಪಂಚಾಯತ್ ಸಿಬಂದಿಗಳು ಮತ್ತು ಇತರ ಕೌನ್ಸಿಲರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version