ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ:ಉಳ್ಳಾಲದಲ್ಲಿ ಬಾರ್ಜ್ ಮುಳುಗಡೆ ದುರಂತ ಪ್ರಕರಣಕ್ಕೆ ಸಂಬಂಧಿಸಿ ಕೋಸ್ಟ್ ಗಾರ್ಡ್ ಹೋವರ್ ಕ್ರಾಫ್ಟ್ ಎಸಿವಿ ಎಚ್-196 ಮತ್ತು ಅಮರ್ತ್ಯಾ ಹಡಗಿನ ಮೂಲಕ ನಿರಂತರ ಮೂರು ಗಂಟೆಗಳ ಕಾರ್ಯಾಚರಣೆಯಲ್ಲಿ ಬಾರ್ಜ್ನಲ್ಲಿ ಅಪಾಯಕ್ಕೆ ಸಿಲುಕಿದ್ದ 23 ಮಂದಿಯನ್ನು ಭಾನುವಾರ ಬೆಳಿಗ್ಗೆ ರಕ್ಷಿಸಲಾಗಿದ್ದು, ನಾಲ್ಕು ಮಂದಿಯನ್ನು ಶನಿವಾರ ಸಂಜೆ ವೇಳೆ ರಕ್ಷಿಸಲಾಗಿತ್ತು.
ಕಡಲ್ಕೊರೆತ ಶಾಶ್ವತ ಕಾಮಗಾರಿ ನಿರತ ಬಾರ್ಜ್ ಶನಿವಾರ ಮಧ್ಯಾಹ್ನದ ವೇಳೆ ಅಪಾಯಕ್ಕೆ ಸಿಲುಕಿತ್ತು. ಸಂಜೆ ವೇಳೆ ಕೋಸ್ಟ್ ಗಾರ್ಡ್ ಹಡಗು ಕಾರ್ಯಾಚರಣೆಗೆ ಇಳಿದರೂ, ಸಮುದ್ರದ ಅಲೆಗಳ ರಭಸಕ್ಕೆ ಕಾರ್ಯಾಚರಣೆಗೂ ಅಡ್ಡಿಯುಂಟಾಗಿತ್ತು. ಆದರೂ ನಡುವೆ ಸಣ್ಣ ದೋಣಿ( ಲೈಫ್ ಗಾರ್ಡ್) ಮೂಲಕ ಅಪಾಯದಲ್ಲಿ ಸಿಲುಕಿದ್ದ ಬಾರ್ಜ್ ಸಮೀಪಕ್ಕೆ ತೆರಳಿ ನಾಲ್ವರನ್ನು ದೋಣಿ ಮೂಲಕ ಹಾಕುವ ಸಂದರ್ಭ, ಬಾರ್ಜ್ ಗೆ ತಗಲಿದ ಲೈಫ್ ಗಾರ್ಡ್ ಬೋಟಿಗೆ ಹಾನಿಯಾಗಿ ನಾಲ್ವರನ್ನು ಮಾತ್ರ ರಕ್ಷಿಸಲಾಗಿತ್ತು.
ಬೃಹತ್ ಗಾತ್ರದ ಅಲೆಗಳ ನಡುವೆ ಕಗ್ಗತ್ತಲಲ್ಲಿ ರಾತ್ರಿ ಕಳೆದರು: ಸಮುದ್ರದಲ್ಲಿ 60 ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದರಿಂದ ಬಾಜ್ ್ ಸಮೀಪ ಯಾವುದೇ ದೋಣಿ ಬರುವ ಸಾಧ್ಯತೆಗಳಿರಲಿಲ್ಲ. ಬಾರ್ಜ್ನಲ್ಲಿದ್ದ ಎಂಜಿನ್ ಹಾನಿಗೀಡಾಗಿ, ಜನರೇಟರ್ ಎಲ್ಲವೂ ಸ್ಥಗಿತಗೊಂಡಿತ್ತು. ಒಂದೆಡೆ ಸಮುದ್ರದ ನೀರು ಒಳನುಗ್ಗುತ್ತಿದ್ದರೆ, ಇನ್ನೊಂದೆಡೆ ಕತ್ತಲಲ್ಲಿ ರಕ್ಷಣೆಗೆ ಕರೆ ನೀಡಿದರೂ ಯಾರು ಸ್ಥಳಕ್ಕೆ ಬರುತ್ತಿಲ್ಲ ಅನ್ನುವ ಭೀತಿಯಿಂದಲೇ ರಾತ್ರಿಯಿಡಿ ಬಾರ್ಜ್ನಲ್ಲೇ 23 ಕಾರ್ಮಿಕರು ಕಳೆದರು. ರಾತ್ರಿಯಿಡೀ ದೂರದಲ್ಲಿ ಕೋಸ್ಟ್ ಗಾರ್ಡ್ಗೆ ಸೇರಿದ ಅಮತ್ರ್ಯಾ ಹಡಗು ಕಾವಲು ನಿಂತಿತು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಮತ್ತೆ ಮೊದಲ ಕಾರ್ಯಾಚರಣೆ ಸಣ್ಣ ದೋಣಿಗಳ ಮೂಲಕ ಎಂಟು ಮಂದಿಯನ್ನು ರಕ್ಷಿಸಿ ಅಮತ್ರ್ಯಾ ಹಡಗಿನತ್ತ ಕೊಂಡೊಯ್ದರೆ, ಮತ್ತೆ ಉಳಿದವರನ್ನು ಕೋಸ್ಟ್ ಗಾರ್ಡ್ ಹೋವರ್ ಕ್ರಾಫ್ಟ್ ಎಸಿವಿ ಎಚ್-196 ಮೂಲಕ ಕಾರ್ಯಾಚರಿಸಿ 23 ಮಂದಿಯನ್ನೂ ಸುರಕ್ಷಿತವಾಗಿ ಹಡಗಿನತ್ತ ಸಾಗಿಸಲಾಯಿತು.
ಸಮುದ್ರಕ್ಕೆ ಹಾರಿ ದೋಣಿ ಸೇರಿದರು :
ಬಾಜ್ ್ ಹತ್ತಿರ ಕಲ್ಲುಗಳು, ರೀಫ್ ಇರುವುದರಿಂದ ಮತ್ತು ಅಲೆಗಳ ಅಬ್ಬರ ಹೆಚ್ಚಿದ್ದರಿಂದಾಗಿ ದೋಣಿ ಬಾಜ್ ್ ಸಮೀಪಕ್ಕೆ ಬರಲು ಅಸಾಧ್ಯವಾಗಿತ್ತು. ಅಧಿಕಾರಿಗಳ ಸೂಚನೆಯಂತೆ ಲೈಫ್ ಜಾಕೆಟ್ ಧರಿಸಿದ್ದ ಎಲ್ಲರೂ ಸಮುದ್ರಕ್ಕೆ ಹಾರಿ ಬಳಿಕ ದೋಣಿ ಸೇರಿದರು. ಅಲೆಗಳ ಅಬ್ಬರದ ನಡುವೆ ಕೋಸ್ಟ್ ಗಾಡ್ ್ ಸಿಬ್ಬಂದಿ ಹಾಗೂ ರಕ್ಷಣೆಗೆ ಮೊರೆ ಇಡುತ್ತಿದ್ದ ಕಾರ್ಮಿಕರ ದೃಶ್ಯ ಸಿನಿಮೀಯ ಶೈಲಿಯಂತಾಗಿತ್ತು.
ಬ್ರಿಟಿಷ್ ಕಂಪೆನಿಯ ಎ.ಸಿ.ವಿ. (Air cutpon Vesel) ಓವರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು.
