Site icon Ullalavani

ಹರೇಕಳ ಕೊಲೆಯತ್ನ ಪ್ರಕರಣ ಪ್ರಮುಖ ಆರೋಪಿ ಬಂಧನ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಹರೇಕಳ: ಅಂಗಡಿ ಮಾಲೀಕನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಹರೇಕಳದ ಕಡೆಂಜ ತೋಟ ನಿವಾಸಿ ಅಶ್ರಫ್ ಯಾನೆ ಪೊಂಗ ಅಶ್ರಫ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪಾವೂರು ಕಡವಿನ ಬಳಿ ಅಂಗಡಿ ಹೊಂದಿರುವ ಅಬ್ದುಲ್ ರಹಿಮಾನ್ ಮೇ.24ರ ರಾತ್ರಿ ಅಂಗಡಿ ಮುಚ್ಚಿ ಮನೆ ಕಡೆಗೆ ತೆರಳುವ ಸಂದರ್ಭ ರಿಕ್ಷಾದಲ್ಲಿ ಬಂದಿದ್ದ ಆರು ಮಂದಿಯ ತಂಡ ಮಾರಕಾಯುಧಗಳಿಂದ ಅಶ್ರಫ್ ಎಂಬವರ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭ ರಹಿಮಾನ್ ಓರ್ವರೇ, ಆರು ಮಂದಿ ದುಷ್ಕರ್ಮಿಗಳ ನಡುವೆ ಹೊೈಕೈ ನಡೆಸಿದ್ದರು. ಬಳಿಕ ಗಂಭೀರ ಗಾಯಗೊಂಡಿದ್ದ ರಹಿಮಾನ್ ಅವರನ್ನು ನಾಟೆಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಹಿಮಾನ್ ಅಂಗಡಿಗೆ ಬರುತ್ತಿದ್ದ ಪೊಂಗ ಅಶ್ರಫ್ ಮೊಬೈಲ್ ರೀಚಾರ್ಜ್, ಪಾನೀಯ ಕುಡಿದರೂ ಹಣ ನೀಡದೆ ದಬ್ಬಾಳಿಕೆ ನಡೆಸುತಿತ್ತು. ಇದನ್ನು ರಹಿಮಾನ್ ವಿರೋಧಿಸಿದ್ದರು. ಈ ಹಿಂದೆ ರಹಿಮಾನ್ ಅವರನ್ನು ದರೋಡೆ ನಡೆಸಿದ್ದ ಪ್ರಕರಣದಲ್ಲಿಯೂ ಅಶ್ರಫ್ ಮತ್ತು ತಂಡ ಸಕ್ರಿಯವಾಗಿತ್ತು. ಗಾಂಜಾ ವ್ಯಸನಿಗಳಾಗಿದ್ದ ಆರೋಪಿಗಳ ಕುರಿತು ರಹಿಮಾನ್ ಮಾಹಿತಿ ನೀಡಿದರೆಂಬ ಕಾರಣಕ್ಕೆ ಅಶ್ರಫ್ ದಾಳಿ ನಡೆಸಿದ್ದರೆ, ತಂಡದಲ್ಲಿದ್ದ ಓರ್ವನ ಪ್ರಿಯತಮೆಗೂ ಆತನ ಕೃತ್ಯಗಳ ಬಗ್ಗೆ ತಿಳಿಸಿ ಆಕೆಯನ್ನು ದೂರ ಮಾಡಿದ್ದರೆಂಬ ಕಾರಣಕ್ಕಾಗಿ ತಂಡ ಕೊಲೆಗೆ ಯತ್ನಿಸಿದೆ. ಬಂಧಿತ ಅಶ್ರಫ್ ವರ್ಷದ ಹಿಂದೆ ದೆಬ್ಬೇಲಿ ಸಮೀಪ ಜೀವನ್ ಎಂಬಾತನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದನು.

Exit mobile version