ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ:ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಗ್ರಾಮ ಚಾವಡಿ ಇದರ ವತಿಯಿಂದ ಪಜೀರು, ಪಾವೂರು, ಹರೇಕಳ, ಕೊಣಾಜೆ, ಬೋಳ್ಯಾರು ಗ್ರಾಮಗಳ ವ್ಯಾಪ್ತಿಗೊಳಪಟ್ಟ ಅರ್ಹ 300 ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ವಿತರಣಾ ಕಾರ್ಯಕ್ರಮ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರಗಿತು.
ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೋಟ್ಯಾನ್ ಕಿಲ್ಲೂರು, ಕಾರ್ಯದರ್ಶಿ ಜನಾರ್ಧನ ಅಂಚನ್ ಹರೇಕಳ, ಕೋಶಾಧಿಕಾರಿ ನಾರಾಯಣ ಪೂಜಾರಿ ಪರಂಡೆ ಹಾಗೂ ಹಿರಿಯರಾದ ರಾಘವ ಪೂಜಾರಿ ಪಂಡಿತ್ ಹೌಸ್, ಲಕ್ಷ್ಮಣ ಸಾಲಿಯಾನ್ ಪಜೀರು, ಜಗನ್ನಾಥ ಕುಕ್ಯಾನ್ ಹರೇಕಳ, ಶ್ರೀನಿವಾಸ ಪೂಜಾರಿ ಪಾವೂರು, ಭೋಜ ಕುಕ್ಯಾನ್ ಕೊಣಾಜೆ, ಗಂಗಾಧರ ಪೂಜಾರಿ ಪಜೀರು, ರವೀಂದ್ರ ಬಂಗೇರ ಕೊಣಾಜೆ, ಸುಭಾಷ್ ಧರ್ಮ ನಗರ ಇನ್ನಿತರರು ಉಪಸ್ಥಿತರಿದ್ದರು.