ಉಳ್ಳಾಲ ನ್ಯೂಸ್ ನೆಟ್ ವರ್ಕ್
ಹರೇಕಳ : ಕಾಂಗ್ರೆಸ್ ಕಳೆದ 60 ವರ್ಷದ ಅಧಿಕಾರದಲ್ಲಿ ನಡೆಸಿದ ಸಾಧನೆಯನ್ನು ಕಳೆದ ಮೂರು ವರ್ಷದಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಯಶಸ್ವಿ ಆಡಳಿತದಲ್ಲಿ ಸಾಧಿಸಿ ತೋರಿಸಿದ್ದು, ಕೇಂದ್ರ ಸರಕಾರದ ಯೋಜನೆಗಳನ್ನು ಮತ್ತು ಸಾಧನೆಯನ್ನು ಮನೆ ಮನೆ ಮುಟ್ಟಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರದ್ದು ಎಂದು ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಮನಮೋಹನ್ ಸಿಂಗ್‍ವರೆಗಿನ ಅಧಿಕಾರದ ಸಂದರ್ಭದಲ್ಲಿ ಪಾಕಿಸ್ಥಾನ ಮತ್ತು ಚೀನಾದೊಂದಿಗೆ ಗಡಿ ತಂಟೆಗಳಾದ ಭಾರತ ವಿಶ್ವ ಸಂಸ್ಥೆಗೆ ದೂರು ನೀಡುತ್ತಿತ್ತು. ಆದರೆ ಕಳೆದ ಮೂರು ವರ್ಷದಲ್ಲಿ ಗಡಿ ತಂಟೆಗಳಾದಾಗ ಭಾರತ ವಿಶ್ವಸಂಸ್ಥೆಗೆ ದೂರು ನೀಡಿಲ್ಲ ಆದರೆ ಪಾಕಿಸ್ಥಾನ ಮತ್ತು ಚೀನ ದೂರು ನೀಡಿದ್ದು, ಇದು ನರೇಂದ್ರ ಮೋದಿಯ ಅಧಿಕಾರದ ಕಾರ್ಯಶೈಲಿಯ ಉದಾಹರಣೆಯಲ್ಲಿ ಒಂದು ಎಂದ ಅವರು
ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಭದ್ರತೆ, ಅಭಿವೃದ್ಧಿಯ ಸಂಕಲ್ಪದಿಂದ ಇಂದು ವಿಶ್ವದಾದ್ಯಂತ ನರೇಂದ್ರ ಮೋದಿಯವರು ಯಶಸ್ವಿಯಾಗಿದ್ದಾರೆ. ಹಿಂದೆ ಜವಹಾರ್‍ಲಾ ನೆಹರೂ ಸೇರಿದಂತೆ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮಾತನಾಡಿ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಸಂಕಲ್ಪ ಮಾಡಿದರೆ ಮುಂದಿನ 2018ನೇ ಸಾಲಿಗೆ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಯು.ಟಿ. ಖಾದರ್ ಅವರನ್ನು ಸೋಲಿಸುವ ಮೂಲಕ ಬಿಜೆಪಿಯ ಶಾಸಕರನ್ನು ಗೆಲ್ಲಿಸಲು ಸಾಧ್ಯವಿದೆ ಎಂದರು.
ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಬಿಜೆಪಿಯಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರಾಗಿ ದುಡಿದವರಿಗೆ ಪಕ್ಷ ಒಂದಲ್ಲ ಒಂದು ರೀತಿಯಲ್ಲಿ ಗುರುತಿಸುವ ಕಾರ್ಯ ಮಾಡುತ್ತಿದ್ದು, ಕಾರ್ಯಕರ್ತರು ಮುಖಂಡರಾಗಿ ಬೆಳೆಯಲು ಸಾದ್ಯವಿರುವುದು ಬಿಜೆಪಿಯಲ್ಲಿ ಮಾತ್ರ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಶಂಭು ನಾಯ್ಕ್, ಬಿಜೆಪಿ ಹಿರಿಯ ಮುಖಂಡ ರಾಜಾರಾಮ ಭಟ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ದಕ್ಷಿಣ ರೈಲ್ವೇ ಸಲಹಾ ಮಂಡಳಿ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ ಕುತ್ತಾರುಗುತ್ತು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಷ್ಮಾ ಜನಾರ್ಧನ್, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ರಾಜೀವಿ ಕೆಂಪು ಮಣ್ಣು, ಬಿಜೆಪಿ ಜಿಲ್ಲಾ ಮಹಿಳಾ ಸಮಿತಿ ಲಲಿತಾ ಸುಂದರ್, ಮಂಗಳೂರು ಕ್ಷೇತ್ರ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅದ್ಯಕ್ಷ ಅಶ್ರಫ್ ಹರೇಕಳ, ಎಸ್‍ಟಿ ಮೋರ್ಚಾ ಅದ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ವಿಠಲ ಸಾಲಿಯಾನ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಾ| ಕೆ.ಎ.ಮುನೀರ್ ಬಾವಾ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸುಳ್ಳೇಂಜೀರು, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಮೋಹನ್‍ದಾಸ್ ಶೆಟ್ಟಿ ನೆತ್ತಿಲಬಾಳಿಕೆ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಸುಜೀರ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಸರೋಜಿನಿ ನಾಗಮೂಲೆ, ಪಾವೂರು ಗ್ರಾಮ ಸಮಿತಿ ಎಸ್ ರಮೇಶ್, ಕೊಣಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಶೆಟ್ಟಿ ಅಂಬ್ಲಮೊಗರು, ಮಂಗಳೂರು ಕ್ಷೇತ್ರ ಕಾರ್ಯದರ್ಶಿ ಹೇಮಂತ್ ಶೆಟ್ಟಿ ಬೆಳ್ಮ, ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಸುಜೀತ್ ಮಾಡೂರು, ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್ ಆಳ್ವ, ಮುಖಂಡರಾದ ಆನಂದ ಶೆಟ್ಟಿ ತೊಕ್ಕೊಟ್ಟು, ಗ್ರಾಮ ಸಮಿತಿ ಯುವ ಮೋರ್ಚಾ ಅಧ್ಯಕ್ಷ ಪ್ರಸಾದ್, ಎಸ್‍ಸಿ ಮೋರ್ಚಾದ ವಸಂತ್, ಕಾರ್ಯದರ್ಶಿ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಪಕ್ಷದ ಗ್ರಾಮ ಮಟ್ಟದ ಹಿರಿಯ ಕಾರ್ಯಕರ್ತರಿಗೆ ಗೌರವ ಸಮರ್ಪಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆಗೈದವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ನಿವೃತ್ತ ಪೋಸ್ಟ್ ಮಾಸ್ಟರ್ ವಾದಿರಾಜ ಆಚಾರ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕø ತ ಶಿಲ್ಪಿ ಬಾಲಕೃಷ್ಣ ಆಚಾರ್ಯ, ಪುರೋಹಿತರಾದ ಶ್ರೀನಿವಾಸ ಕಲ್ಲೂರಾಯ, ದೇವಪ್ಪ ಶಾಂತಿ, ಹಿಂದೂ ರುದ್ರಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೂವಪ್ಪ ನಾಯ್ಕ, ನಿವೃತ್ತ ಮುಖ್ಯ ಶಿಕ್ಷಕಿ ಅಮಿತಾ ಟೀಚರ್, ಗುರಿಕಾರರಾದ ಈಶ್ವರ್ ನಾಗಮೂಲೆ, ಪಕ್ಷದ ಹಿರಿಯ ಕಾರ್ಯಕರ್ತರಾದ ದಾಮೋದರ ಗಟ್ಟಿ, ಕುಪ್ಪಿಲ ರಾಮಣ್ಣ ರೈ, ಜಗದೀಶ್ ಭಂಡಾರಿ, ಭಾಸ್ಕರ ರೈ ಸಂಪಿಗೆದಡಿ, ಜಯರಾಮ ಗಟ್ಟಿ, ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯ ಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ಗ್ರಾಮ ಸಮಿತಿಯಿಂದ ಸನ್ಮಾನಿಸಲಾಯಿತು.
ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿ ಪ್ರಸ್ತಾವನೆಗೈದರು. ವಾಮನ್‍ರಾಜ್ ಪಾವೂರು ಕಾರ್ಯಕ್ರಮ ನಿರ್ವಹಿಸಿದರು. ನಿತಿನ್ ಶೆಟ್ಟಿ ಮಣಿಬೆಟ್ಟು ವಂದಿಸಿದರು.