Site icon Ullalavani

ಬಡ ಹೆಣ್ಣಿನ ವಿವಾಹಕ್ಕೆ ಧನ ಸಹಾಯ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು:ಜಿಲ್ಲಾ ತಮಿಳ್ ಮರುತ್ತ್ವರ್ ಸಮೂಹಂ ವತಿಯಿಂದ ಬಡ ಹೆಣ್ಣಿನ ವಿವಾಹ ಸಮಾರಂಭಕ್ಕೆ ಧನಸಹಾಯ ವಿತರಣಾ ಕಾರ್ಯಕ್ರಮ ನಡೆಯಿತು.

ತೊಕ್ಕೊಟ್ಟಿನ ಗಣೇಶ ಮಂದಿರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮರುತ್ತ್ವರ್ ಸಮುದಾಯದ ರಾಜೇಂದ್ರ ಉಳ್ಳಾಲ ಅವರ ಮಗಳ ಮದುವೆಗೆ 33,000 ರೂಪಾಯಿಯನ್ನು ಸಂಘದ ವತಿಯಿಂದ ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಕುಮಾರ್ ಸಾಲೆತ್ತೂರು, ಸಲಹೆಗಾರ ಅನ್.ಗುಣಶೇಖರ್ ತೊಕ್ಕೊಟ್ಟು, ಎ.ಅನ್ಬಲಗನ್ ಬಾಕ್ರಬೈಲ್, ಕಾಶಿ ಉಳ್ಳಾಲ, ಮಹಿಳಾ ಘಟಕದ ಅಧ್ಯಕ್ಷೆ ಮಾರಿಕಣ್ಣ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.

Exit mobile version