Site icon Ullalavani

ಉಳ್ಳಾಲ :ನುಸ್ರತುಲ್ ಮಸಾಕೀನ್ ವತಿಯಿಂದ ರಂಝಾನ್ ಕಿಟ್ ವಿತರಣೆ

ಉಳ್ಳಾಲ ನ್ಯೂಸ್ ನೆಟ್ ವಕ್೯

ಉಳ್ಳಾಲ: ರಂಝಾನ್ ತಿಂಗಳಲ್ಲಿ ಬಡ ಕುಟುಂಬಗಳಿಗೆ ದಾನ ಧರ್ಮ ಮಾಡುವ ಕೆಲಸಕ್ಕೆ ವಿಶೇಷವಾದ ಮಹತ್ವವನ್ನು ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಆಬ್ದುಲ್ ರಶೀದ್ ಹಾಜಿ ಅಭಿಪ್ರಾಯಪಟ್ಟರು.

ಉಳ್ಳಾಲ ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 160 ಕುಟುಂಬಕ್ಕೆ ಉಚಿತ ರಂಝಾನ್ ಕಿಟ್ಟನ್ನು ಟ್ರಸ್ಟ್ ಕಚೇರಿಯಲ್ಲಿ ವಿತರಿಸಿ ಅವರು ಮಾತನಾಡಿದರು.

ಹಾಜಿ ಸಯ್ಯದ್ ಯಹ್ಯಾ ತಂಙಳ್ ದುಆ ನೆರವೇರಿಸಿದರು, ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಳ್ಳಾಲ ಸಯ್ಯದ್ ಮದನಿ ಕೇಂದ್ರ ಜುಮಾ ಮಸೀದಿ ಖತೀಬರು ಶಮೀಮ್ ಸಖಾಫಿ,ಕೇಂದ್ರ ಜುಮಾ ಮಸೀದಿ ಸದಸ್ಯರಾದ ಮುಹಮ್ಮದ್ ಬಾವಾ,ಹಾಜಿ ಯು.ಎಚ್.ಮಹಮ್ಮದ್ ಹಳೆಕೋಟೆ, ಆಸೀಫ್ ಅಬ್ದುಲ್ಲಾ, ಎ.ಎ.ಖಾದರ್,ಮುಸ್ತಫ ಮಂಚಿಲ,ಹಮೀದ್ ಕೋಡಿ, ಇಬ್ರಾಹಿಂ ಖಾಸಿಮ್,ಯು.ಎಸ್.ಹನೀಫ್ ಹಾಜಿ, ಕೆ.ಎನ್.ಮುಹಮ್ಮದ್ ಕುಂಞ,ಅಹ್ಮದ್,ಸಿದ್ದೀಕ್,ರೆಹಮತುಲ್ಲಾ,ಯು.ಕೆ.ಇಬ್ರಾಹಿಮ್,ಯು.ಎಸ್.ಹಸನಬ್ಬ, ಉಳ್ಳಾಲ ನಗರ ಸಬೆ ಸದಸ್ಯ ಯು.ಎ.ಇಸ್ಮಾಯಿಲ್ ಉಪಸ್ಥಿತರಿದ್ದರು.

ಹಳೆಕೋಟೆ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಮುಖ್ಯ ಶಿಕ್ಷಕ ಕೆ.ಎಮ್.ಕೆ.ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version